Harikathe Alla Girikathe.News

Tuesday, June 14, 2022

248

ಹರಿಕಥೆ ಅಲ್ಲ ಗಿರಿಕಥೆ ಟೇಲರ್ ಲೋಕಾರ್ಪಣೆ

         ಮನರಂಜನೆ ನೀಡುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿತು. ನಾಯಕ ರಿಷಬ್‌ಶೆಟ್ಟಿ ಮಾತನಾಡಿ ‘ಹೀರೋ ಪ್ರಧಾನವಾದ ಕೆಜಿಎಫ್ ನೋಡಿದ್ದಾರೆ, ಭಾವನೆಗಳನ್ನು ತುಂಬಿಡುವ ೭೭೭ ಚಾರ್ಲಿ ಚಿತ್ರವನ್ನು ವೀಕ್ಷಿಸಿ ಗೆಲ್ಲಿಸಿದ್ದಾರೆ. ಈಗ ನೋಡುಗನಿಗೆ ನಗುವ ಸಮಯವಿರುವುದರಿಂದ ನಮ್ಮ ಚಿತ್ರವು ಹೇಳಿ ಮಾಡಿಸಿದಂತಿದೆ. ತುಂಬಾ ಖುಷಿ ಖುಷಿಯಾಗಿ ನೋಡಿಸಿಕೊಂಡು ಹೋಗಲಿದೆ. ಚಿತ್ರ ಮಾಡಲು ಹೋಗುವವನ ಕಥೆ ವ್ಯಥೆಗಳನ್ನು ಇಲ್ಲಿ ಹಾಸ್ಯದ ನೆರಳಿನಲ್ಲಿ ತೋರಿಸಲಾಗಿದೆ. ಎಲ್ಲರ ನಿರೀಕ್ಷೆಯಂತೆ ಬಂದಿದೆ ಎಂದರು. ರಿಷಬ್‌ಶೆಟ್ಟಿ ನಂಬಿಕೆ ಮೇಲೆ ಬಂಡವಾಳ ಹೂಡಿರುವುದಾಗಿ ನಿರ್ಮಾಪಕ ಸಂದೇಶ್‌ನಾಗರಾಜ್ ಹೇಳುತ್ತಾರೆ.

       ನಾವು ಹೇಳಲು ಹೊರಟ ಕಥೆಯ ಒದು ಝಲಕ್ ಇದರ ತುಣುಕಾಗಿದೆ. ಇದೇ ರೀತಿಯ ಲವಲವಿಕೆ ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಚಿತ್ರರಂಗದಲ್ಲಿ ಕಂಡ ನೈಜ ಪಾತ್ರಗಳು ಸಿನಿಮಾ ರೂಪದಲ್ಲಿ ಬಂದು ಹೋಗುತ್ತವೆ ಎಂಬುದು ನಿರ್ದೇಶಕರುಗಳಾದ ಕರಣ್ ಹಾಗೂ ಅನಿರುದ್ದ್ ಜಂಟಿ ನುಡಿ. ರಚನಾಇಂದರ್, ತಪಸ್ವಿನಿಪೊನ್ನಚ ನಾಯಕಿಯರು. ಹೊನ್ನವಳ್ಳಿ ಕೃಷ್ಣ ನಾಯಕನ ತಂದೆಯಾಗಿ, ವಿಭಿನ್ನ ಪಾತ್ರದಲ್ಲಿ ಯೋಗರಾಜಭಟ್ ಉಳಿದಂತೆ ದಿನೇಶ್‌ಮಂಗಳೂರು ಮುಂತಾದವರು ಅಭಿನಯಿಸಿದ್ದಾರೆ. ತ್ರಿಲೋಕ್‌ತ್ರಿವಿಕ್ರಮ್ ಬರೆದಿರುವ ಹಾಡಿಗೆ ವಾಸುಕಿವೈಭವ್ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ ಸಿನಿಮಾವು ಜೂನ್ ೨೩ರಂದು ತೆರೆಗೆ ಬರಲಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,