ಉಪಾಧ್ಯಕ್ಷರಾಗಿ ಚಿಕ್ಕಣ್ಣ
ತನ್ನದೆ ಸಾಮರ್ಥ್ಯದಿಂದ ಹೆಸರನ್ನು ಉಳಿಸಿಕೊಂಡಿರುವ ಹಾಸ್ಯ ನಟ ಚಿಕ್ಕಣ್ಣ ನಾಯಕ ಆಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆಂದು ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತು. ಅದಕ್ಕೆ ಈಗ ರೆಕ್ಕೆಪುಕ್ಕ ಬಂದಿದೆ. ಅಂದರೆ ಗುರುವಾರದಂದು ಬನಶಂಕರಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಅಂದಹಾಗೆ ಚಿತ್ರದ ಹೆಸರು ‘ಉಪಾಧ್ಯಕ್ಷ’. ‘ರ್ಯಾಂಬೋ-೨’ ಖ್ಯಾತಿಯ ಅನಿಲ್ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಡಾ.ಸೂರಿ, ತರುಣ್ಸುಧೀರ್, ನಂದಕಿಶೋರ್, ಚಂದ್ರಮೋಹನ್, ಚಿಕ್ಕಣ್ಣ, ಅನಿಲ್ ಒಟ್ಟಿಗೆ ಸೇರಿಕೊಂಡು ಕಥೆ ಬರೆದಿರುವುದು ವಿಶೇಷ. ಇದರ ಕುರಿತಂತೆ ಮಾತನಾಡಿರುವ ನಿರ್ದೇಶಕರು ಇದು ಹಿಟ್ ಚಿತ್ರ ‘ಅಧ್ಯಕ್ಷ’ ಮುಂದುವರಿದ ಭಾಗ ಎನ್ನಬಹುದು. ಆ ಸಿನಿಮಾ ಎಲ್ಲಿಗೆ ನಿಂತಿತ್ತೋ, ಅಲ್ಲಿಂದ ಮುಂದುವರೆಯುತ್ತದೆ. ಅದರಲ್ಲಿನ ಕೆಲವು ಪಾತ್ರಗಳು ಇಲ್ಲೂ ಇರುತ್ತದೆ. ಅದು ರಿಮೇಕ್. ಇದು ಸ್ವಮೇಕ್ ಆಗಿ ಹಾಸ್ಯದ ರಸದೌತಣ ನೀಡಿಲಿದೆ ಅಂತ ಹೇಳಿಕೊಂಡಿದ್ದಾರೆ.
ಹೀರೋ ಆಗಲು ಆಫರ್ಗಳು ಬರುತ್ತಿದ್ದವು. ಆದರೆ ಬೇಡ ಅಂತಿದ್ದ ನನಗೆ ಕೊನೆಗೂ ನಾಯಕನಾಗಿ ಅವಕಾಶ ಸಿಕ್ಕಿದೆ. ಬೇರೆ ಚಿತ್ರಗಳಲ್ಲಿ ೧೫ ದೃಶ್ಯಗಳು ಇರುತ್ತಿದ್ದರೆ, ಇದರಲ್ಲಿ ೪೦ ಇರುತ್ತದೆ. ಹಲವರು ನಟರನ್ನು ಹತ್ತಿರದಿಂದ ನೋಡಿ ಒಂದಿಷ್ಟು ವಿಷಯಗಳನ್ನು ಕಲಿತಿದ್ದೇನೆ. ಈಗ ಆತ್ಮವಿಶ್ವಾಸ ಬಂದಿದೆ. ಹೀರೋ ಆದರೂ ಯಾವುದೇ ಪಾತ್ರ ಮಾಡಲು ಸಿದ್ದ ಎನ್ನುತ್ತಾರೆ ಚಿಕ್ಕಣ್ಣ. ರಾಬರ್ಟ್ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸಗೌಡ ಪತ್ನಿ ಸ್ಮಿತಾಉಮಾಪತಿ ಹೆಸರಿನಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಕಿರುತೆರೆ ನಟಿ ಮಲೈಕಾವಸುಪಾಲ್ ನಾಯಕಿ. ಅರ್ಜುನ್ಜನ್ಯಾ ಸಂಗೀತ, ಶೇಖರ್ಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ.