ಶರಣ್ ತರುಣ್ಗೆ ರವಿಚಂದ್ರನ್ ಪಾಠ
ಕ್ರೇಜಿಸ್ಟಾರ್ ಡಾ.ರವಿಚಂದ್ರನ್ ಇದ್ದಾರೆ ಅಂದರೆ ಅಲ್ಲಿ ತೂಕದ ಮಾತುಗಳು ಇರುತ್ತವೆ. ಅದರಂತೆ ಮೊನ್ನೆ ‘ಗುರು ಶಿಷ್ಯರು’ ಚಿತ್ರದ ‘ಆಣೆ ಮಾಡಿ ಹೇಳುತೀನಿ’ ಹಾಡನ್ನು ಬಿಡುಗಡೆ ಮಾಡಲು ಆಗಮಿಸಿದ್ದರು. ತಂಡಕ್ಕೆ ಶುಭಹಾರೈಸಿ ಮಾತನಾಡುತ್ತಾ ಶರಣ್ ತರುಣ್ ಗೆಳೆತನ ನೂರು ಕಾಲ ಹೀಗೆ ಇರಬೇಕು ಅಂತ ಬಯಸುತ್ತೇನೆ. ಇವರಿಬ್ಬರೂ ಒಬ್ಬರನೊಬ್ಬರು ಹೊಗಳಿಕೊಂಡು ಇರುತ್ತಾರೆ. ಇಬ್ಬರ ಮಧ್ಯೆ ತೆಗಳುವವರೊಬ್ಬರು ಬೇಕು. ಅದು ನಾನು ಮಾಡ್ತಿನಿ. ಮಾಸ್ ಯಾವತ್ತಿದ್ದರೂ ಕಾಲುಗಳನ್ನು ಕುಣಿಯುವಂತೆ ಮಾಡುತ್ತದೆ. ಮೆಲೋಡಿ ಹೃದಯವನ್ನು ತಾಳ ಹಾಕಿಸುತ್ತದೆ. ಮಾಸ್ ತಾತ್ಕಾಲಿಕ, ಮೆಲೋಡಿ ಶಾಶ್ವತ. ನಾನು ಯಾವತ್ತೂ ಮಾಸ್ ಆಗಿ ಯೋಚನೆ ಮಾಡೇ ಇಲ್ಲ. ಕ್ಲಾಸ್ ಅಂತ ಮಾಸ್ ತಲುಪಿದವನು ಎಂದರು.
ತರುಣ್‌ಸುಧೀರ್ ನನಗೆ ಪ್ರಥಮ ಗುರು, ನಿರ್ದೇಶಕ ಜಡೇಶ್ ಎರಡನೇ ಗುರು. ಅವರಿಗೆ ನಾನು ಸಮರ್ಪಿಸಿಕೊಡಿದ್ದೇನೆ. ೨೫ ವರ್ಷಗಳ ಹಿಂದೆ ನಾನು ಮೀಸೆ ಬಿಟ್ಟಿದ್ದೆ. ನಮ್ಮಪ್ಪ ಒಂದು ಸಿನಿಮಾ ಮಾಡಿಸಿದರು. ಅದು ದೊಡ್ಡ ಹಿಟ್ ಆಯಿತು. ಆಗ ಹೊರಗಡೆ ಎಲ್ಲೋ ಓಡಾಡುವಂತಿರಲಿಲ್ಲ. ಬೇರೆ ಅವಕಾಶಗಳು ಸಿಗಲಿಲ್ಲ. ಹೊರಗೆ ಹೋದರೆ ಜನ ಕಂಡು ಹಿಡಿದು ಬಿಡುತ್ತಿದ್ದರು. ನನಗೂ ಆಗ ಅಭಿನಯ ಬೇಕಿರಲಿಲ್ಲ. ಹೀಗಾಗಿ ಮೀಸೆ ತೆಗೆಸಬೇಕಾಯಿತು ಎಂದು ಶರಣ್ ಹೇಳಿದರು.
ತರುಣ್‌ಸುಧೀರ್ ಹೇಳುವಂತೆ ರವಿ ಸರ್ ಗೋಲ್ಡನ್ ಹ್ಯಾಂಡ್. ಅವರು ನಮ್ಮ ಮೊದಲ ಚಿತ್ರ ‘ರ‍್ಯಾಂಬೋ’ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟಿದ್ದು ಹಿಟ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ನನ್ನ ಚಿತ್ರಗಳ ಒಂದಲ್ಲಾ ಒಂದು ಗೀತೆ ಯಶಸ್ವಿ ಆಗಿದೆ ಎಂದು ಧನ್ಯವಾದ ತಿಳಿಸಿದರು. ನಾಯಕಿ ನಿಶ್ವಿಕಾನಾಯ್ಡು ತಮ್ಮ ಪಾತ್ರದಂತೆ ಹಳ್ಳಿ ಹುಡುಗಿಯಾಗಿ ಲಂಗದಾವಣಿಯಲ್ಲಿ ಗಮನ ಸೆಳೆದರು.