ಲಂಕಾಸುರ ಟೀಸರ್ ಬಿಡುಗಡೆ
ವಿನೋದ್ಪ್ರಭಾಕರ್ ‘ಟೈಗರ್ ಟಾಕೀಸ್’ ಹೆಸರಿನಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಅಂಗವಾಗಿ ಸಂಸ್ಥೆಯ ಉದ್ಗಾಟನೆ ಹಾಗೂ ‘ಲಂಕಾಸುರ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡುತ್ತಾ, ನಾನು ಟೈಗರ್ ಪ್ರಭಾಕರ್ ತೊಡೆ ಮೇಲೆ ಕೂತು ಬೆಳೆದವನು. ಅವರ ಪ್ರತಿಭೆ ಎತ್ತರಕ್ಕೆ ಕರೆದುಕೊಂಡು ಹೋಯಿತು. ಇಂದು ಅಪ್ಪನ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಕಟ್ಟಿಕೊಂಡಿದ್ದೀರಾ. ಒಳ್ಳೆಯದಾಗಲಿ ಎಂದರು. ‘ಬಂದಮುಕ್ತ’ ಚಿತ್ರದಲ್ಲಿ ಅವರು ನಾಯಕ, ನಾನು ವಿಲನ್ ಆಗಿದ್ದೆ. ಹಿಂದಿನ ನೆನಪು ಮತ್ತು ಭಾವನೆಗಳನ್ನು ಇಟ್ಟುಕೊಂಡು ಅಭಿನಯಿಸಿದ್ದೇನೆ. ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ ಎನ್ನುತ್ತಾರೆ ದೇವರಾಜ್. ಖಳನಾಗಿರುವ ನನ್ನನ್ನು ಚೆನ್ನಾಗಿ ತೆರೆ ಮೇಲೆ ತೋರಿಸಿದ್ದಾರೆ. ಎಲ್ಲಾ ಸೀನ್ಗಳು ಅದ್ಬುತವಾಗಿ ಮೂಡಿಬಂದಿದೆ ಅಂತ ನೆನಪುಗಳನ್ನು ರವಿಶಂಕರ್ ಹಂಚಿಕೊಂಡರು.
ತುಣುಕುಗಳಲ್ಲಿ ಹೀರೋ ಎಂಟ್ರಿ ಭರ್ಜರಿಯಾಗಿ ನಡೆದಿದೆ. ಇಲ್ಲಿ ಪೈಟಿಂಗ್ ಪ್ರಧಾನವಾಗಿ ಕಾಣುತ್ತದೆ. ಇದೊಂದು ಮಾಸ್ ಮಸ್ತ್ ಚಿತ್ರ. ನಾಯಕನ ಹೆಸರು ರಾಘವ. ಡಾನ್ ಆಗುವುದು ಯುಕ್ತಿಯಿಂದ, ರೌಡಿ ಎನಿಸುವುದು ಶಕ್ತಿಯಿಂದ, ಲಂಕಾಸುರದಲ್ಲಿ ದೇವರಾಜ್ ಡಾನ್ ಆಗಿದ್ದಾರೆ.
ಪತ್ನಿ ಹಾಗೂ ನಿರ್ಮಾಪಕಿ ನಿಶಾ ಹೇಳುವಂತೆ ನಮ್ಮ ಸಂಸ್ಥೆಯ ಪ್ರಥಮ ಪ್ರಯತ್ನ. ಪ್ರತಿಯೊಬ್ಬರೂ ಸಹಕಾರ ಕೊಟ್ಟಿದ್ದಾರೆ. ವಿನೋದ್ ಇಮೇಜಿಗೆ ತಕ್ಕಂತೆ ಚಿತ್ರ ಮಾಡಲಾಗಿದ್ದು, ಚಿತ್ರದುದ್ದಕ್ಕೂ ಅದ್ದೂರಿತನ ಎದ್ದು ಕಾಣುತ್ತದೆ. ನಿಮ್ಮಗಳ ಸಹಕಾರ, ಪ್ರೋತ್ಸಾಹ ಅಗತ್ಯ ಎನ್ನುತ್ತಾರೆ. ಗೆಳೆಯನಿಗೆ ಶುಭಹಾರೈಸಲು ಅಭಿಷೇಕ್ಅಂಬರೀಷ್, ಧರ್ಮಕೀರ್ತಿರಾಜ್, ಯಶಸ್ ಮುಂತಾದವರು ಆಗಮಿಸಿದ್ದರು.