Hudugi.Film Press Meet

Sunday, July 10, 2022

257

 

*ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ..ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ ಮಾಡಿದ RGV*

 

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತದೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ‌ ಮಾಡುವುದರಲ್ಲಿ ಸದಾ ಮುಂದೆ.

ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ‌ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಮಾಡಲಾಗ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.

ಮಾಧ್ಯಮಗಳೊಟ್ಟಿಗೆ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ‌ ಬ್ರೂಸ್ಲಿಯಿಂದ ಸ್ಪೂರ್ತಿಯಿಂದ ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ ಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಈ ಕಲೆ ಮಾಡುವವರ ಸಂಖ್ಯೆ ತೀರಾ ವಿರಳ. ಅದ್ರಲ್ಲೂ ಹೆಣ್ಣು ಮಕ್ಕಳು ಮಾಡೋದು‌ ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನು ಆಕೆ ಮಾಡಲಾಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ ಎಂದು ತಿಳಿಸಿದರು.

 

 

ಹುಡುಗಿ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಸಿನಿಮಾದಲ್ಲಿ ಪೂಜಾ ಭಾಲೇಕರ್ ನಾಯಕಿಯಾಗಿ ನಟಿಸಿದ್ದಾರೆ. ಭಾರತ ಹಾಗೂ ಚೀನಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಚೀನಾದಲ್ಲಿ  ಬಿಡುಗಡೆಯಾಗುತ್ತಿದೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬೆಳ್ಳಿತೆರೆಗೆ ಜುಲೈ 15ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,