ತೆರೆಗೆ ಸಿದ್ದ ಲವ್ ೩೬೦
ಹಿರಿಯ ನಿರ್ದೇಶಕ ಶಶಾಂಕ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ‘ಲವ್ ೩೬೦’ ಚಿತ್ರದ ಹಾಡುಗಳು ಗಮನ ಸೆಳೆಯುತ್ತಿದೆ. ಈಗ ಮೂರನೇ ಹಾಡು ‘ಭೊರ್ಗರೆದು’ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲರಿಗೂ ಇಷ್ಟವಾಗಿದೆ. ಶಶಾಂಕ್ ನಿರ್ದೇಶನ ಮಾಡಿರುವ ‘ಮೊಗ್ಗಿನ ಮನಸು’ ಚಿತ್ರವುತೆರೆಕಂಡು ಹದಿನಾಲ್ಕು ವರ್ಷಗಳಾಗಿವೆ. ಇದರ ನೆನಪಿಗಾಗಿ ಈ ಹಾಡನ್ನು ಅವರೇ ಬರೆದಿರುವುದು ವಿಶೇಷ. ಮುಂದೊಂದು ದಿನ ‘ಮೊಗ್ಗಿನ ಮನಸು-೨’ ಮಾಡುವ ಆಸೆ ಇದೆ. ಆ ಚಿತ್ರವನ್ನು ಹೊಸ ಕಲಾವಿದರರೊಂದಿಗೆ ಮಾಡುತ್ತೇನೆ. ಅದರಲ್ಲೂ ಹೊಸಬರೊಂದಿಗೆ ಕೂಡಿಕೊಂಡಿದ್ದು ಸುಮಾರು ವರ್ಷಗಳೇ ಆಗಿತ್ತು. ಪ್ರವೀಣ್ ಎಂಬ ನಟನನ್ನು ಪರಿಚಯಿಸುತ್ತಿದ್ದೇನೆ.
ಇವರ ಕುಟುಂಬದವರೆಲ್ಲರೂ ವೈದ್ಯರು. ಎಂಬಿಬಿಎಸ್ ಓದಿರುವ ಇವರಿಗೆ ನಟನೆ ಕನಸು. ಅಮ್ಮನ ಬಳಿ ವಿಷಯ ತಿಳಿಸಿದಾಗ, ಮಗನ ಆಸೆಗೆ ತಣ್ಣೀರು ಹಾಕದೆ ನಿರ್ಮಾಣ ಮಾಡಿದ್ದಾರೆ. ಆದರೆ ಅವರ ಬಳಿ ಅಷ್ಟು ಹಣವಿಲ್ಲದ್ದರಿಂದ ನಮ್ಮ ಸಂಸ್ಥೆಯಿಂದ ಒಂದಷ್ಟು ಹಣವನ್ನು ಹೂಡಿದ್ದೇವೆ. ಅವರಿಗೆ ನಟನೆಗೆ ಬೇಕಾದ ಎಲ್ಲಾ ರೀತಿಯ ತಯಾರಿ ನೀಡಿ ಆರಂಭಿಸಲಾಯಿತು ಅಂತ ಹೇಳುತ್ತಾರೆ.
ವಿದ್ಯಾರ್ಥಿಯಾದಾಗಿನಿಂದಲೂ ಬಣ್ಣದ ಲೋಕದ ಸೆಳತ ಇತ್ತು. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಿಂ ಇನ್ಸ್ಟ್ಯೂಟ್ಗೆ ಬಂದು ಅಭಿನಯ ಕಲಿಯುತ್ತಿದ್ದೆ. ಅಪ್ಪನಿಗೆ ವಿಷಯ ತಿಳಿದು ಕೋಪಗೊಂಡರು. ಈಗ ಅವರು ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ. ನನಗೆ ಆಸರೆಯಾದರು. ಬೋಟ್ ಮ್ಯಕಾನಿಕ್ ಪಾತ್ರ ಮಾಡುತ್ತಿದ್ದೇನೆಂದು ನಾಯಕ ಪ್ರವೀಣ್ ಪಾತ್ರದ ಪರಿಚಯವನ್ನು ಮಾಡಿಕೊಂಡರು.
ಲವ್ಮಾಕ್ಟೇಲ್ ಖ್ಯಾತಿಯ ರಚನಾಇಂದೂರ್ ನಾಯಕಿ. ಡ್ಯಾನಿಕುಟ್ಟಪ್ಪ, ಗೋಪಾಲ್ದೇಶಪಾಂಡೆ, ಕಾವ್ಯಶಾಸ್ತ್ರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರ್ಜುನ್ಜನ್ಯಾ ಸಂಗೀತ, ಅಭಿಷೇಕ್ಕಲ್ಲತ್ತಿ ಛಾಯಾಗ್ರಹಣ, ಮಾಸ್ಮಾದ ಸಾಹಸವಿದೆ.