Nishachara.Film Audio Launch

Thursday, July 21, 2022

231

ವಿಶೇಷ ಚೇತನ ನಿರ್ದೇಶಕನ ಚಿತ್ರ ನಿಶಾಚರ

         ಚಂದನವನದಲ್ಲಿ ಕೆಲವೊಮ್ಮೆ ಅದ್ಬುತ ಪ್ರಯೋಗಗಳು ನಡೆಯುತ್ತವೆ. ಅಂತಹ ಒಂದು ಸಾಹಸ ‘ನಿಶಾಚರ’ ಚಿತ್ರದಲ್ಲಿ ನಡೆದಿದೆ. ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಎಸ್.ಭಾಸ್ಕರ್‌ಜಿ ಮೂಲತ: ಅಂಧರು ಎಂದು ಹೇಳಲು ಬೇಸರವಾಗುತ್ತದೆ. ಇಂತಹ ವಿಶೇಷಚೇತನರಿಂದ ಅಡ್ವೆಂಚರ್ ಮತ್ತು ಥ್ರಿಲ್ಲಿಂಗ್ ಚಿತ್ರವೊಂದು ಸಿದ್ದಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ವಿಷಯವನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ಕುರಿತಂತೆ ಮಾತನಾಡಿರುವ ಭಾಸ್ಕರ್.ಜಿ ಬುದ್ದಿಶಕ್ತಿ, ಮೆದುಳು ಚೆನ್ನಾಗಿದ್ದರೆ ಏನು ಬೇಕಾದರೂ ಮಾಡಬಹುದು. ಎಲ್ಲವನ್ನು ಕಣ್ಣಿನಿಂದಲೇ ಮಾಡಬಹುದು ಅಂದುಕೊಳ್ಳಬಾರದು. ಶೀರ್ಷಿಕೆ ಕುರಿತು ಹೇಳುವುದಾದರೆ, ರಾತ್ರಿಯಲ್ಲಿ ಚುರುಕು ಆಗಿರತಕ್ಕಂಥ ಕೆಲವು ಅಭೂತವಾದ ಶಕ್ತಿಗಳು, ಅದಕ್ಕೆ ಪರ್ಯಾಯವಾಗಿ ಈಶ್ವರ ಸಾಲು ಹಾಗೂ ಯಾವುದು ಘೋಚರವಾಗುವುದಿಲ್ಲವೋ, ಅದು ಏನೆಲ್ಲಾ ಮಾಡಬಹುದು. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. 

      ಎರಡು ದಾರಿಯಲ್ಲಿ ಕಥೆಯು ಸಾಗುತ್ತದೆ. ಮೊದಲನೆಯದರಲ್ಲಿ ಪ್ರೀತಿ ತಪ್ಪಾ, ಪ್ರೀತ್ಸೋದು ತಪ್ಪಾ. ಇದು ಯಾವಾಗಲೂ ಗೊಂದಲದಲ್ಲಿ ಇರುತ್ತದೆ. ಪ್ರೀತಿನೂ ತಪ್ಪಲ್ಲ, ಪ್ರೀತ್ಸೋದು ತಪ್ಪಲ್ಲ. ಆದರೆ ಪ್ರೀತಿ ಮಾಡೋ ವ್ಯಕ್ತಿ ತಪ್ಪಿದ್ರೆ ಪ್ರೀತಿ ಎಂಬ ಪರಿಕಲ್ಪನೆ ಬದಲಾವಣೆ ಆಗುತ್ತದೆ. ಎರಡನೆಯದರಲ್ಲಿ ಪೋಷಕರಿಗೆ ಸುಳ್ಳು ಹೇಳಿ, ವಿಷಯವನ್ನು ಮುಚ್ಚಿಟ್ಟು ದೂರದ ಸ್ಥಳಕ್ಕೆ ಹೋದಾಗ ಏನೆಲ್ಲಾ ಅವಘಡಗಳು ಸಂಭವಿಸುತ್ತದೆ. ಮುಂಚಿತವಾಗಿ ಅವರಿಗೆ ಮಾಹಿತಿ ನೀಡಬೇಕು. ಇಲ್ಲಾಂದ್ರೆ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಾಗ ಯಾರು ಸಹಾಯ ಮಾಡಲು ಬರೋಲ್ಲ. ಕಾರ್ಕಳ, ಉಡುಪಿ, ಮಧುಕಳ ಕಡೆಗಳಲ್ಲಿ ೨೬ ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲೂ ಕ್ರೂಸನ್ನು ಬಳಸಿಕೊಂಡು ಸಮುದ್ರದ ಮಧ್ಯದಲ್ಲಿ ಎರಡು ಜೋಡಿಗಳ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.

       ಲತಾ.ಬಿ.ಆರ್. ನಿರ್ಮಾಪಕಿ. ಬೃಂದಾ, ನೇತ್ರಾವತಿ ಸಹ ನಿರ್ಮಾಪಕಿಯರಾಗಿ ಗುರುತಿಸಿಕೊಂಡಿದ್ದಾರೆ. ಅಕ್ಷಯ್‌ಕಾರ್ಕಳ ನಾಯಕ, ಸಸ್ವಿಕಪೂಜಾರಿ ನಾಯಕಿ. ಇವರೊಂದಿಗೆ  ಅಭಿಮನ್ಯು, ಡಾಲಿ, ಹೇಮಚಂದ್ರ, ಮೇಘ ಮುಂತಾದವರು ನಟಸಿದ್ದಾರೆ. ಮಜಾಟಾಕೀಸ್ ಖ್ಯಾತಿಯ ಮೋಹನ್ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿ.ಮಂಜುನಾಥ್‌ಪಟೇಲ್, ಸಂಕಲನ ಮನುಆಡುಗೋಡು ಅವರದಾಗಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,