ಸ್ಪೂಕಿ ಕಾಲೇಜ್ ಟ್ರೇಲರ್ ಬಿಡುಗಡೆ
ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ‘ಸ್ಪೂಕಿ ಕಾಲೇಜ್’ ಬಿಡುಗಡೆಪೂರ್ವ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಯೋಗರಾಜಭಟ್, ರಮೇಶ್‌ಅರವಿಂದ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಅನುಭವ ಪಡೆದುಕೊಂಡಿರುವ ಭರತ್ ರಚನೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ನಿರ್ದೇಶಕರು ಸಿನಿಮಾವು ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಧಾರವಾಡದ ನೂರು ವರ್ಷಗಳಿಗೂ ಹಳೆಯದಾದ ಕಡಿ ಕಾಲೇಜಿನಲ್ಲಿ ಹಾಗೂ ಕ್ಲೈಮಾಕ್ಸ್ ಭಾಗವನ್ನು ದಾಂಡೇಲಿಯ ಕಾಡಿನಲ್ಲಿ ಶೂಟ್ ಮಾಡಲಾಗಿದೆ. ಸ್ಪೂಕಿ ಎಂದರೆ ಭಯ. ಕಾಲೇಜಿನಲ್ಲಿ ಘಟನೆಗಳು ನಡೆಯುವುದರಿಂದ ಸ್ಪೂಕಿಕಾಲೇಜ್ ಎಂದು ಹೆಸರನ್ನು ಇಡಲಾಗಿದೆ. ೬೦ರ ದಶಕದ ಹಾಡು ‘ಮೆಲ್ಲುಸಿರೇ ಸವಿಗಾನ’ ರೀಮಿಕ್ಸ್ ಗೀತೆಗೆ ರೀಷ್ಮಾನಾಣಯ್ಯ ಹೆಜ್ಜೆ ಹಾಕಿದ್ದಾರೆ ಎಂಬುದಾಗಿ ಮಾಹಿತಿ ನೀಡಿದರು.
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್‌ಸಿಂಹ ನಾಯಕ. ದಿಯಾದಲ್ಲಿ ಹೆಸರು ಮಾಡಿರುವ ಖುಷಿರವಿ ನಾಯಕಿ. ಉಳಿದಂತೆ ಅಜಯ್‌ಪೃಥ್ವಿ, ಹನುಮಂತೇಗೌಡ, ಕೆ.ಎಸ್.ಶ್ರೀಧರ್, ವಿಜಯ್‌ಚೆಂಡೂರ್, ಅರಣ್ಯಶೆಟ್ಟಿ, ರಾಜೇಶ್‌ಪೂಜಾರಿ, ಸುನಿಲ್‌ಕುಲಕರ್ಣಿ, ರಘುರಮನಕೊಪ್ಪ ಮುಂತಾದವರು ನಟಿಸಿದ್ದಾರೆ.
ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜನೀಶ್‌ಲೋಕನಾಥ್ ಸಂಗೀತ, ಮನೋಹರಜೋಷಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಅಂದಹಾಗೆ ಸಿನಿಮಾವು ಜನವರಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.