ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಬೆಸೆಯುವ ವೈಶಂಪಾಯನ ತೀರ
ಹಿರಿಯ ರಂಗಕರ್ಮಿ ರಮೇಶ್ ಬೇಗಾರಿ ಮೊದಲಬಾರಿ ನಿರ್ದೇಶನ ಮಾಡಿರುವ ‘ವೈಶಂಪಾಯನ ತೀರ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತು. ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕಥೆ ಆಧರಿಸಿದ್ದು, ಯಕ್ಷಗಾನವನ್ನು ಹಿನ್ನಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ತೋರಿಸಲಾಗಿದೆ. ಮುಖ್ಯ ಅತಿಥಿಯಾಗಿದ್ದ ಗಿರೀಶ್‌ಕಾಸರವಳ್ಳಿ ಮಾತನಾಡಿ ನಿರ್ದೇಶಕರು ಮೂರು ದಶಕಗಳಿಂದ ಕಲಾಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಅನುಭವವಿದೆ. ಯಕ್ಷಗಾನದಂತಹ ಕಲೆಯನ್ನು ಹೊಸ ಆಯಾಮದಲ್ಲಿ ನೋಡುವಂತಹ ಅಪರೂಪದ ಪ್ರತಿಭಾವಂತರು. ಎಲ್ಲರಂತೆ ನಾನು ಕೂಡ ಸಿನಮಾವನ್ನು ನೋಡಲು ಕಾತುರನಾಗಿದ್ದೇನೆ. ತಂಡಕ್ಕೆ ಶುಭವಾಗಲಿ ಎಂದರು.
ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಆರ್.ಸುರೇಶಬಾಬು ನಿರ್ಮಾಣ ಮಾಡಿದ್ದಾರೆ. ವೈಜಯಂತಿ ಅಡಿಗ ನಾಯಕಿ. ಪೋಲೀಸ್ ಅಧಿಕಾರಿಯಾಗಿ ಪ್ರಮೋದ್‌ಶೆಟ್ಟಿ ಉಳಿದಂತೆ ಬಾಬುಹಿರಣಯ್ಯ, ರಮೇಶ್‌ಪಂಡಿತ್, ರವೀಶ್‌ಹೆಗಡೆ, ಗುರುರಾಜಹೊಸಕೋಟೆ, ಶೃಂಗೇರಿರಾಮಣ್ಣ, ರವಿಕುಮಾರ್, ಸತೀಶ್‌ಪೈ, ಸಂತೋಷ್‌ಪೈ ಮುಂತಾದವರು ನಟಿಸಿದ್ದಾರೆ. ಶ್ರೀನಿಧಿಕೊಪ್ಪ ಸಂಗೀತ, ವಿನುಮನಸು ಹಿನ್ನಲೆ ಶಬ್ದ, ಶಶೀರಶೃಂಗೇರಿ ಛಾಯಾಗ್ರಹಣ, ಅವಿನಾಶ್‌ಶೃಂಗೇರಿ ಸಂಕಲನ ಚಿತ್ರಕ್ಕಿದೆ..