ಕಾಣದಶಕ್ತಿಯಲ್ಲಿ ಲತಾಹಂಸಲೇಖಾ ಹಾಡು
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಾಣದ ಶಕ್ತಿ’ ಸಿನಿಮಾದ ಚಿತ್ರೀಕರಣವು ಬೆಂಗಳೂರು, ಹಾವೇರಿ, ಚಿಕ್ಕಮಗಳೂರು ಕಡೆಗಳಲ್ಲಿ ಮುಗಿದಿದೆ. ಮೊನ್ನೆಯಷ್ಟೇ ಕೆ.ಎಂ.ಇಂದ್ರ ಸಾಹಿತ್ಯ ಮತ್ತು ಸಂಗೀತದ ‘ಅಮ್ಮಾನೇ ನೀನಾದೆ, ಅಮ್ಮ ನೀ ನನಗಾದೆ, ಅಕ್ಕ ಅನ್ನೋ ಅಕ್ಕರೆಯವಳೇ’ ಹಾಡಿನ ಧ್ವನಿಮುದ್ರಣವು ನಾದಬ್ರಹ್ಮ ಹಂಸಲೇಖಾ ಸ್ಟುಡಿಯೋದಲ್ಲಿ ನಡೆಯಿತು. ಅಕ್ಕನ ಸೆಂಟಿಮೆಂಟ್ ಕುರಿತಾದ ಗೀತೆಗೆ ಲತಾಹಂಸಲೇಖಾ ಧ್ವನಿಯಾದರು. ಶೃತಿ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಶೃತಿ.ಎಂ. ಮತ್ತು ಎಸ್.ಆರ್.ಸತೀಶ್‌ಬಾಬು ಇವರೊಂದಿಗೆ ಗೆಳೆಯರು ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಎನ್.ಕಾರ್ತಿಕ್ ಪಾಲುದಾರರಾಗಿ ಗುರುತಿಸಿಕೊಂಡಿದ್ದಾರೆ. ಎನ್.ಕಾರ್ತಿಕ್ ಅಂಗವಿಕಲರಾಗಿದ್ದರೂ ಆಕ್ಷನ್ ಕಟ್ ಹೇಳಿರುವುದು ವಿಶೇಷ.
ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದ್ದು, ವಾಮಚಾರ, ಮಾಟಮಂತ್ರ ಅದರಿಂದ ಆಗುವ ಅಡ್ಡ ಪರಿಣಾಮಗಳೇನು? ಅದು ಇದೆಯೋ ಇಲ್ಲವೋ ಅಂತ ಹೇಳ ಹೊರಟಿದ್ದಾರೆ. ಇವೆಲ್ಲವು ಇಲ್ಲ ಎಂದು ಸಂದೇಶದಲ್ಲಿ ಹೇಳಲಾಗಿದೆ. ಯಾವ ರೀತಿ ಎಂಬುದನ್ನು ಚಿತ್ರರೂಪದಲ್ಲಿ ತೋರಿಸಲಾಗಿದೆ
ಹಳ್ಳಿ ಹುಡುಗನಾಗಿ ಕೃಷ್ಣ ನಾಯಕ. ಪತ್ರಕರ್ತೆಯಾಗಿ ಸಿಮ್ರಾನ್ ನಾಯಕಿ. ಇವರೊಂದಿಗೆ ಸುಕನ್ಯ, ರಾಹುಲ್, ಮಂಜು, ಶೃತಿ, ಮಂಜುನಾಥ, ಸತೀಶ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಜಿ.ರೇಣುಕುಮಾರ್, ಸಂಕಲನ ಮಲ್ಲಿಕಾರ್ಜುನ್ ಅವರದಾಗಿದೆ.