ಪ್ರೇಕ್ಷಕರು ಮೆಚ್ಚಿಕೊಂಡ ಪದವಿಪೂರ್ವ
ವರ್ಷದ ಕೊನೆವಾರದಲ್ಲಿ ತೆರೆಕಂಡ ‘ಪದವಿಪೂರ್ವ’ ಚಿತ್ರವು ನೋಡುಗರಿಂದ ಮೆಚ್ಚುಗೆಗೆ ವ್ಯಕ್ತವಾಗಿದೆ. ಪಕ್ಕಾ ಯೂತ್‌ಫುಲ್ ಕಥೆ ಹೊಂದಿದ್ದು, ಕಾಲೇಜು ಹಿನ್ನಲೆಯಲ್ಲಿ ನಡೆಯುವ ಕಥೆಯು ಮನರಂಜನೆಯಿಂದ ಕೂಡಿರುವುದರಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿಶಾಮನೂರು ಭವಿಷ್ಯದ ನಾಯಕನಾಗುತ್ತಾರೆ. ಈಗಾಗಲೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಯೋಗರಾಜಭಟ್ ಹಾಗೂ ರವಿಶಾಮನೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರೋತ್ಸಾಹದಿಂದ ಚಿತ್ರತಂಡವು ಖುಷಿಯಾಗಿದ್ದು ಮಾದ್ಯಮದ ಮುಂದೆ ಬಂದು ಸಂತಸವನ್ನು ಹಂಚಿಕೊಂಡಿತು.
ಹೊಸಬರ ಚಿತ್ರವಾದರೂ ಮೆಚ್ಚುಗೆ ಸಿಗುತ್ತಿದೆ. ಅನೇಕರು ನೋಡಿ ತಮ್ಮ ಕಾಲೇಜು, ಸ್ನೇಹಿತರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಪೃಥ್ವಿ ಅವರ ಮುಂದಿನ ಚಿತ್ರವನ್ನು ಯೋಗರಾಜಭಟ್ ನಿರ್ದೇಶನ ಮಾಡಲಿದ್ದಾರಂತೆ. ಇದೇ ಸಂದರ್ಭದಲ್ಲಿ ಪೃಥ್ವಿ ಮಾತನಾಡಿ ಚಿಕ್ಕಂದಿನಲ್ಲೆ ನನಗೆ ನಟನಾಗಬೇಕೆಂಬ ಆಸೆ ಇತ್ತು. ಒಂದು ಸಿನಿಮಾದಲ್ಲಾದರೂ ಕಾಣಿಸಿಕೊಂಡರೆ ಸಾಕು ಎಂಬ ಕನಸು ಕಾಣುತ್ತಿದ್ದೆ. ಅನೇಕ ಕಡೆ ಅಡಿಷನ್ ಕೊಟ್ಟಿದ್ದೆ. ಹೈಟ್ ಇದ್ದೆನೆಂಬ ಕಾರಣಕ್ಕೆ ರಿಜೆಕ್ಟ್ ಆಗಿದ್ದು. ಹಾಗಂತ ಪ್ರಯತ್ನ ನಿಲ್ಲಿಸಲಿಲ್ಲ. ಡ್ಯಾನ್ಸ್, ಫೈಟ್ ಎಲ್ಲವನ್ನು ಕಲಿತಿದ್ದೇನೆ. ಸರ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡರೆ ಸಾಕು ಎಂದವನಿಗೆ ಈಗ ಅವರ ನಿರ್ದೇಶನದ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ಹೆಮ್ಮೆ ಅನಿಸಿದೆ ಎಂದರು.
ಮಾತಿನ ಮನೆಯಲ್ಲಿ ನಿರ್ದೇಶಕ ಹರಿಪ್ರಸಾದ್‌ಜಯಣ್ಣ, ನಿರ್ಮಾಪಕರುಗಳಾದ ಯೋಗರಾಜಭಟ್,ರವಿಶಾಮನೂರು, ನಾಯಕಿ ಅಂಜಲಿ ಸೇರಿದಂತೆ ಮುಂತಾದವರು ಸಂತೋಷವನ್ನು ಹೇಳಿಕೊಂಡರು.