Suraari.Film News

Monday, January 09, 2023

170

ಸುರಪಾನ ಸೇವಿಸುವವನು ಸುರಾರಿ

       ಕನ್ನಡ ಅಲ್ಲದೆ ಹಿಂದಿ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸುರಾರಿ’ ಚಿತ್ರದ ಟೀಸರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.  ರಚನೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಹಾಗೂ ನಾಯಕನಾಗಿ ಅಭಿನಯಿಸಿರುವುದು ವಿಶಾಲಜಯ. ಐರಿಸ್ ಸ್ಟುಡಿಯೋ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

       ಚಿತ್ರದ ಕುರಿತು ಹೇಳುವುದಾದರೆ ದೇವತೆಗಳ ವೈರಿ ರಾಕ್ಷಸ. ಅಂದರೆ ಸುರಪಾನ. ಪ್ರಾಚೀನ ಮದ್ಯಸಾರ ಎನ್ನಬಹುದು. ಹಾಗೆಯೇ ಸುರಪಾನವನ್ನು ಸೇವಿಸುವವನಿಗೆ ಸುರಾರಿ ಅಂತಲೂ ಕರೆಯುತ್ತಾರೆ. ಕಥೆಯಲ್ಲಿ ನಡೆಯತಕ್ಕಂಥ ಕೆಲವೊಂದು ಚಟುವಟಿಕೆಗಳು ಅಸುರತನವಾಗಿರುತ್ತದೆ. ಎರಡು ಕಾರಣಕ್ಕೆ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ಮೊದಲನೆಯದಾಗಿ ತನ್ನೊಳಗಡೆ ಇರತಕ್ಕಂಥ ಕೆಟ್ಟ ಅಭ್ಯಾಸಗಳು, ವಿಷಯಗಳು. ಅದನ್ನು ಹೇಗೆ ಸಂಹಾರ ಮಾಡುತ್ತಾನೆ. ಎರಡನೆಯದಾಗಿ ಸಮಾಜದಲ್ಲಿ ನಡೆಯತಕ್ಕಂಥ ಅಹಿತಕರ ಘಟನೆಗಳಿಗೆ ಯಾವ ರೀತಿ ಮುಕ್ತಗೊಳಿಸುತ್ತಾನೆ. ಹಿಂದಿ ಚಿತ್ರ ‘ದಂಗಲ್’ದಲ್ಲಿ ಅಮೀರ್‌ಖಾನ್ ತನ್ನ ಬೊಜ್ಜು ಕರಗಿಸಿಕೊಳ್ಳಲು ಒಂಬತ್ತು ತಿಂಗಳು ಸಮಯ ತೆಗೆದುಕೊಂಡಿದ್ದರಂತೆ. ಆದರೆ ಇದರಲ್ಲಿ ನಾಯಕನಾದವನ ದಪ್ಪ ಹೊಟ್ಟೆಯನ್ನು ಕೇವಲ ೧೦೦ ದಿನಗಳಲ್ಲಿ ದೇಹ ಪರಿವರ್ತನೆ ಗೊಳಿಸಿಕೊಂಡಿರುವುದನ್ನು ತೋರಿಸಲಾಗಿದೆ. ದೇಹ ಬೆಳಸಲು ಒಂದು ರೀತಿಯ ಡಯೆಟ್. ಅದೇ ರೀತಿ ಇಳಿಸಲು ವರ್ಕ್‌ಔಟ್ ಮಾಡಲಾಗಿದೆ. ಅದಕ್ಕಾಗಿ ವಿಶ್ವದ ಮೊಟ್ಟಮೊದಲ ಸಿನಿಮಾ ಅಂತ ಹೇಳಿಕೊಂಡಿದೆ. ಒಟ್ಟಾರೆ ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನದ ಕಥೆ ಎನ್ನಬಹುದು.

      ಅರ್ಚನಾಸಿಂಗ್ ನಾಯಕಿ. ಫಿಟ್‌ನೆಸ್ ಮಾಸ್ಟರ್ ಆಗಿ ಚಿತ್ರಲ್‌ರಂಗಸ್ವಾಮಿ, ಸಿಬಿಐ ಅಧಿಕಾರಿಯಾಗಿ ರತನ್ಯಾ,  ಗರಡಿ ಪೈಲ್ವಾನ್ ಆಗಿ ಗಣೇಶ್‌ರಾವ್ ಉಳಿದಂತೆ ಅವಿನಾಶ್, ಓಂಪ್ರಕಾಶ್‌ರಾವ್, ಮಿಮಿಕ್ರಿಗೋಪಿ ಜತೆಗೆ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಏಳು ಹಾಡುಗಳಿಗೆ ಅನಂತ್‌ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮನೋಹರ-ವೀರೇಶ್, ಸಂಕಲನ ಸತೀಶ್‌ಚಂದ್ರಯ್ಯ-ನಿಶಿತ್‌ಪೂಜಾರಿ, ಸಾಹಸ ಕೌರವವೆಂಕಟೇಶ್-ಚಂದ್ರುಬಂಡೆ, ನೃತ್ಯ ಬಾಲ-ಸೂರಿ ಅವರದಾಗಿದೆ. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಮಾಗಡಿ, ಚಿಂತಾಮಣಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವನ್ನು ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,