ನವ ನಾಯಕಿಯರಿಗೆ ಒಬ್ಬರೇ ನಾಯಕ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಮೊದಲ ಮಳೆ’ ಚಿತ್ರಕ್ಕೆ ರಾಜನರಸಿಂಹ ನಾಯಕ ಮತ್ತು ನಿರ್ಮಾಪಕ. ಇವರಿಗೆ ಒಂಬತ್ತು ನಾಯಕಿಯರು ಇರುವುದು ವಿಶೇಷ. ಕಥೆ ಬರೆದು ನಿರ್ದೇಶನ ಮಾಡಿರುವುದು ರಾಜಶರಣ್. ಯಾವ ಹುಡುಗಿಯೂ ಇಷ್ಟಪಡದಂಥ ರೂಪವುಳ್ಳ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಎದುರಾಗುವ ಸನ್ನಿವೇಶಗಳನ್ನು ಕಟ್ಟಿಕೊಂಡು ಅದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಜತೆಗೆ ಮರ್ಡರ್ ಮಸ್ಟ್ರಿ ಹಾರರ್ ಇರಲಿದೆ. ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ ಮುಂತಾದವರು ಇದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜನರಸಿಂಹ ನಾನೊಬ್ಬ ರೈತನ ಮಗ. ನಟನಾಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲು ಹೋಗಿ ಮೋಸ ಹೋದೆ. ಈಗ ನಾನೇ ಬಂಡವಾಳ ಹಾಕಿದ್ದು, ಹೀರೋ ಆಗಲು ಸಿನಿಮಾ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಕಥೆಯ ಸಾರಾಂಶ.
‘ಎಮ್ಮೆ ತಮ್ಮ’ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಾಜಶರಣ್‌ಗೆ ಎರಡನೇ ಅವಕಾಶ. ನಿರ್ಮಾಪಕರು ಸ್ನೇಹಿತರಾಗಿರುವುದರಿಂದ ಅವರಿಗೆ ಹೊಂದುವಂಥ ಕಥೆ, ಮಾಡಿದಾಗ ೧೦ ಜನ ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡಲಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಛಾಲೆಂಜ್ ತೆಗೆದುಕೊಂಡು ಚಿತ್ರ ಮುಗಿಸಿದ್ದಾರಂತೆ. ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲ ಮಳೆ ಇದ್ದಂತೆ. ಹಾಗಯೇ ನಾಯಕನ ಬದುಕಿನಲ್ಲಿ ಅದು ಹೇಗೆ ಅನ್ನೊದು ಹೈಲೈಟ್ ಆಗಿದೆ.