ಶೂಟಿಂಗ್ ಮುಗಿಸಿದ ಕರಿ ಹೈದ ಕರಿ ಅಜ್ಜ
ತ್ರಿವಿಕ್ರಮ ಸಪಲ್ಯ ನಿರ್ಮಾಣ, ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣವು ಅಂದುಕೊಂಡಂತೆ ಮುಗಿದಿದೆ. ಪವಾಡ ಪುರುಷ ಕೊರಗಜ್ಜ ಜೀವನಧಾರಿತ ಕಥೆಯನ್ನು ಹೊಂದಿದೆ. ಶೂಟಿಂಗ್ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಕೊರಗಜ್ಜ ಎಂದು ಕರೆಯುವ ೨೨,೨೩ ವರ್ಷ ಬದುಕಿದ್ದ ತನಿಯ ಅಥವಾ ಕಾಂತಾರ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥನ ಇದರಲ್ಲಿದೆ. ಹಾಲಿವುಡ್-ಬಾಲಿವುಡ್ ನೃತ್ಯಸಂಯೋಜಕ ಸುದೀಪ್ ಸೋಪರ್ಕರ್ ದೈವದ ಪಾತ್ರವನ್ನು ನಿಭಾಯಿಸಿದ್ದಾರೆ.
ಕೊರಗಜ್ಜನ ಜತೆಗೆ ಇರುವ ಗುಳಿಗ, ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ ಕಲ್ಲಾಪು ಬೂರ್ದಗೋಳಿ ಇವರೆಡರ ಜತೆಗೆ ದೈವವು ಇದೆ. ಈ ಸನ್ನಿವೇಶಕ್ಕಾಗಿ ಗುಳಿಗನ ರೋಲ್‌ನ್ನು ಗುಳಿಗ ನರ್ತನದ ರೀತಿ ತೋರಿಸಲಾಗಿದ್ದು, ಅದಕ್ಕೆ ಹೊಂದುವ ಪಾತ್ರಕ್ಕೆ ಸುದೀಪ್ ಸೋಪರ್ಕರ್ ಸೂಕ್ತ ಅನಿಸಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಗಿದೆಯಂತೆ.
ಶೃತಿ ಕೊರಗಜ್ಜನ ಸಾಕು ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೋಂದು ವಿಶೇಷ ಪಾತ್ರದಲ್ಲಿ ಭವ್ಯ ನಟಿಸಿದ್ದಾರೆ. ತುಳ ನಾಡ ಜನರ ಸಂಸ್ಕ್ರತಿಯನ್ನು ಜನರಿಗೆ ತೋರಿಸುವ ಆಸೆಯಿಂದ ನಿರ್ಮಾಪಕರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.