ಫೆಬ್ರವರಿ ೩ರಂದು ತನುಜಾ ಹಾಜರ್
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರಭಟ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ತನುಜಾ’ ಚಿತ್ರವು ಫೆಬ್ರವರಿ ೩ರಂದು ತೆರೆಕಾಣಲಿದೆ. ಕೊರೋನಾ ವೇಳೆ ನಿಟ್ ಪರೀಕ್ಷೆ ಬರೆಯಲಾಗದೆ ಒದ್ದಾಡಿದ ಹುಡುಗಿಗೆ ಮುಖ್ಯಮಂತ್ರಿಗಳೇ ಕೇಂದ್ರದ ನೆರವು ಪಡೆದು ಪರೀಕ್ಷೆ ಬರೆಯಲು ಸಹಕರಿಸುವ ಕಥೆ ಇದಾಗಿದೆ. ಅಂದು ಸುದ್ದಿಯು ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಎಕ್ಸಾಂ ಬರೆದ ಅಂಶಗಳನ್ನು ತೆಗೆದುಕೊಂಡು ಸಿನಿಮಾ ರೂಪಕ್ಕೆ ಅಳವಡಿಸಲಾಗಿದೆ.
ಅಂಕಣದಿಂದ ಪ್ರೇರಿತನಾಗಿ ನಿರ್ದೇಶನ ಮಾಡಲು ಮುಂದಾದೆ. ನನ್ನ ಹಲವು ಸ್ನೇಹಿತರು ಬಂಡವಾಳ ಹೂಡಿದರು. ಒಂದು ದಿನದಲ್ಲಿ ನಡೆಯುವ ಕಥೆಯಿದು. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಕ್ಟೋಬರ್ ಒಳಗೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಹರೀಶ್.ಎಂ.ಡಿ.ಹಳ್ಳಿ.
ಸಪ್ತಕಾವೂರು ತನುಜಾ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್‌ನಟರಂಗ ಆಕೆ ಪರೀಕ್ಷೆ ಬರೆಯಲು ಕಾರಣಕರ್ತರಾದ ಅಕಾಡೆಮಿಯ ಪ್ರದೀಪ್‌ಈಶ್ವರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರದ್ಯೋತನ್ ಸಂಗೀತ, ರವೀಂದ್ರನಾಥ್ ಛಾಯಾಗ್ರಹಣವಿದೆ. ಚಂದ್ರಶೇಖರ್‌ಗೌಡ ಮತ್ತು ಪ್ರಕಾಶ್‌ಮದ್ದೂರು ನಿರ್ಮಾಪಕರು.