ಇನಾಮ್ದಾರ್ ಟೀಸರ್ ಲೋಕಾರ್ಪಣೆ
‘ಇನಾಮ್ದಾರ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇನುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸಿನಿಮಾವು ೧೮೯೦ರ ಸಮಯದಲ್ಲಿ ಪಶ್ಚಿಮ ಘಟ್ಟ ಬುಡಕಟ್ಟು ಜನಾಂಗದ ನಡುವೆ ನಡೆದಂತ ಸತ್ಯ ಘಟನೆಯನ್ನು ಆಧರಿಸಿದೆ. ‘ಕತ್ತಲಕೋಣೆ’ ನಿರ್ದೇಶನ ಮಾಡಿರುವ ಸಂದೇಶ್‌ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಕಪ್ಪು ಸುಂದರಿಯ ಸುತ್ತ’ವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ನಿರಂಜನ್‌ಶೆಟ್ಟಿ ನಿರ್ಮಾಣ ಮಾಡಿರುವುದ ಹೊಸ ಅನುಭವ. ರಾಜಕೀಯ, ನಕ್ಸಲಿಸಂ ಜತೆಗೆ ಬುಡಕಟ್ಟು ಜನರ ಜೀವನದ ಹಿನ್ನಲೆಯಲ್ಲಿ ಚಿತ್ರವು ಸಾಗುತ್ತದೆ. ಅಲ್ಲಿನ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೂ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೂ ನಡುವೆ ಇರುವ ನಂಟು ಹಾಗೂ ಮೇಲ್ವರ್ಗ ಮತ್ತು ಕೆಳವರ್ಗದ ಜನರ ಘರ್ಷಣೆ. ಉತ್ತರ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಷೆ ಎರಡು ಚಿತ್ರದಲ್ಲಿ ಕಾಣಸಿಗುತ್ತದೆ. ಕಾಡಿನ ಮುಗ್ದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಎರಡು ಚಿತ್ರಕಥೆಗಳಲ್ಲಿ ಕಥೆಯು ಸಾಗುವುದು ವಿಶೇಷ.
ನವ ಪ್ರತಿಭೆ ರಂಜನ್‌ಛತ್ರಪತಿ ನಾಯಕ. ಚಿರಶ್ರೀಅಂಚನ್, ಎಸ್ತರ್‌ನರೋನ ನಾಯಕಿಯರು. ಜನಾಂಗದ ಒಡೆಯನಾಗಿ ಪ್ರಮೋದ್‌ಶೆಟ್ಟಿ, ಪೋಲೀಸ್ ಅಧಿಕಾರಿಯಾಗಿ ಶರತ್‌ಲೋಹಿತಾಶ್ವ, ಎಸ್ತರ್‌ನರೋನ, ಎಂ.ಕೆ.ಮಠ, ರಘುಪಾಂಡೇಶ್ವರ್ ಮುಂತಾದವರು ನಟಿಸಿದ್ದಾರೆ. ಮೋಹನ್.ಎನ್.ಆರ್.ಪುರ ಸಾಹಿತ್ಯಕ್ಕೆ ರಾಕಿಸೋನು ರಾಗ ಒದಗಿಸಿದ್ದಾರೆ. ಛಾಯಾಗ್ರಹಣ ಮುರಳಿ, ಸಂಕಲನ ಶಿವರಾಜ್‌ಮೇಹು, ನೃತ್ಯ ಗೀತಾಸಾಯಿ ಅವರದಾಗಿದೆ.