ಟೆಂಪರ್ ಟ್ರೈಲರ್ ಬಿಡುಗಡೆ
ಸಾಹಿತಿ ಮಂಜುಕವಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ‘ಟೆಂಪರ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಪ್ರಚಾರದ ಹಂತವಾಗಿ ಮೊನ್ನೆ ಟ್ರೇಲರ್ ಬಿಡಗುಡೆ ಸಮಾರಂಭ ನಡೆಯಿತು. ಕತೆಯಲ್ಲಿ ಆತನಿಗೆ ಅಪ್ಪ-ಅಮ್ಮ-ತಂಗಿ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳಲು ಇಬ್ಬರು ಪ್ರಾಣ ಸ್ನೇಹಿತರು. ಬಾಲ್ಯದಿಂದಲೂ ಯಾರೇ ತಪ್ಪು ಮಾಡಿದರೂ ಅದಕ್ಕೆ ತಕ್ಕಂತೆ ನ್ಯಾಯ ಒದಗಿಸೋ ಗುಣವುಳ್ಳವನು. ಮುಂದೆ ಗ್ಯ್ರಾರೇಜ್‌ದಲ್ಲಿ ಕೆಲಸ ಮಾಡುವಾಗ ಖಳನ ಸಹೋದರಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗುತ್ತದೆ. ಒಂದು ಕಡೆ ತನ್ನ ಪ್ರಿಯತಮೆಯನ್ನು ಉಳಿಸುಕೊಳ್ಳುವ ಸಲುವಾಗಿ ಹೋರಾಟ, ಮತ್ತೋಂದು ಕಡೆ ಕುಟುಂಬ ಸದಸ್ಯರನ್ನು ಸರಿದೂಗಿಸುವುದು. ಇವರೆಡನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದು ಸಿನಿಮಾದ ಸಾರಾಂಶವಾಗಿದೆ. ಸ್ನೇಹ, ತಂದೆ-ತಾಯಿ ಬಾಂದವ್ಯ ಮತ್ತು ಪ್ರೀತಿ ಎಷ್ಟು ಮುಖ್ಯವೆಂಬುದನ್ನು ಸಂದೇಶದಲ್ಲಿ ಹೇಳಲಾಗಿದೆ.
ಆರ್ಯನ್‌ಸೂರ್ಯ ಒರಟು ಸ್ವಭಾವದವನಾಗಿ ನಾಯಕ. ಎಂಬಿಬಿಎಸ್ ವಿದ್ಯಾರ್ಥಿಯಾಗಿ ಕಾಶಿಮಾ ನಾಯಕಿ. ಮುಖ್ಯ ಖಳನಾಯಕನಾಗಿ ಬಲರಾಜವಾಡಿ, ದುಷ್ಟ ಸಹೋದರರಾಗಿ ಯತಿರಾಜ್, ದಿನೇಶ್, ಗೆಳಯರಾಗಿ ಅದರಲ್ಲೂ ಮೂಕನಾಗಿ ಪವನ್‌ಕುಮಾರ್, ಧನುಯಲಗಚ್, ಇವರೊಂದಿಗೆ ಟೆನ್ನಿಸ್‌ಕೃಷ್ಣ, ಶೋಭರಾಜ್, ತಬಲನಾಣಿ,ಬಾಬು ಹಿರಣಯ್ಯ, ಸುಧಾಬೆಳವಾಡಿ, ಲಯನ್‌ಪ್ರಭಾಕರ್, ಸನತ್‌ಕುಮಾರ್, ಲಕ್ಷಿಸಿದ್ದಯ್ಯ ಮತ್ತು ಮಾಸ್ಟರ್ ಪವನ್‌ಮೋರೆ ಮುಂತಾದವರು ಅಭಿನಯಿಸಿದ್ದಾರೆ. ಐದು ಹಾಡಗುಳಿಗೆ ಆರ್.ಹರಿಬಾಬು ಸಂಗೀತ, ಆರ್.ಕೆ.ಶಿವಕುಮಾರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನವಿದೆ. ಮಂಡ್ಯಾ, ಮೈಸೂರು, ಮಡಕೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ೫೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಬಾಲಾಜಿ ಎಂಟರ್‌ಪ್ರೈಸಸ್ ಮುಖಾಂತರ ಬಿ.ಮೋಹನಬಾಬು ಮತ್ತು ವಿ.ವಿನೋದ್‌ಕುಮಾರ್ ಜಂಟಿಯಾಗಿ ಬಂಡವಾಳ ಹೂಡಿರುವುದು ಹೊಸ ಅನುಭವ.