Television Cricket Link.News

Saturday, December 03, 2022

162

 

" *ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4"ರ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ.*

 

2019 ರಲ್ಲಿ ಆರಂಭವಾಗಿ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ "ಟೆಲಿವಿಷನ್ ಕ್ರಿಕೆಟ್ ಲೀಗ್" ನ 4 ನೇ ಆವೃತ್ತಿ (ಸೀಸನ್ 4) ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಈ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಬಿಡೆಗಡೆ ಸಮಾರಂಭ ಲುಲು ಗ್ಲೋಬಲ್ ಮಾಲ್ ನಲ್ಲಿ ನಡೆಯಿತು. ಖ್ಯಾತ ನಟ ನೀನಾಸಂ ಸತೀಶ್, ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಮಾಡಿದರು.

 

 ದೀಪಕ್ "ಟೆಲಿವಿಷನ್ ಕ್ರಿಕೆಟ್ ಲೀಗ್" ನ ಫೌಂಡರ್. ಮಂಜೇಶ್ ಮತ್ತು ದಿವ್ಯ ಪ್ರಸಾದ್ ಕೋ ಫೌಂಡರ್ ಆಗಿದ್ದಾರೆ.

 

ಟ್ರಿನ್ಕೊ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4 ರ ಟೈಟಲ್ ಸ್ಪಾನ್ಸರ್ ಆಗಿದ್ದಾರೆ.

 

ಟೆಲಿವಿಷನ್ ಕ್ರಿಕೆಟ್ ಯಶಸ್ವಿಯಾಗಿ 3 ಸೀಸನ್ ಪೂರೈಸಿದೆ. 4 ಸೀಸನ್ ನಲ್ಲಿ 6 ತಂಡಗಳು ಭಾಗಿಯಾಗಲಿದೆ.

 

ಈ ಸೀಸನ್ ನಲ್ಲಿ ಭಾಗಿಯಾಗಲಿರುವ 6 ತಂಡಗಳ ವಿವರ ಈ ರೀತಿಯಿದೆ.

ಪ್ರೊವಿಟೇಲ್ ಹೆಲ್ತ್  ನ ಡಾ||ಶಿಲ್ಪ ಮಾಲೀಕತ್ವದ ರೋರಿಂಗ್ ಲಯನ್ಸ್ ತಂಡದ ನಾಯಕ ಕಿರಿಕ್ ಕೀರ್ತಿ ಹಾಗೂ ಉಪನಾಯಕ ಕಾರ್ತಿಕ್ ಮಹೇಶ್. ಶೃತಿ ರಮೇಶ್, ಶುಭ ರಕ್ಷ ಹಾಗೂ ಸುಶ್ಮಿತ.

 

ಡಾ||ಚೇತನ ಪ್ರೊಡಕ್ಷನ್ಸ್ ನ ಡಾ||ಚೇತನ ಮಾಲೀಕತ್ವದ "ಜಟಾಯು" ತಂಡದ ನಾಯಕನಾಗಿ ಹರ್ಷ ಸಿ.ಹೆಚ್ ಗೌಡ ಹಾಗೂ ಉಪನಾಯಕನಾಗಿ ಹರೀಶ್ ಇದ್ದಾರೆ. ಸಾಕ್ಷಿ ಮೇಘನಾ ಹಾಗೂ ಪೂಜಾ.

 

ಡಿ ಜಿ ಇನ್ಫಿನಿಟಿ ಕಂಪನಿಯ ಸುಲ್ತಾನ್ ಹಾಗೂ ಎಂ.ಆರ್ ಸ್ವಾಮಿ ಮಾಲೀಕರಾಗಿರುವ "ಕ್ರೇಜಿ ಕಿಲ್ಲರ್" ತಂಡದ ನಾಯಕ ಅರ್ಜುನ್ ಯೋಗಿ ಹಾಗೂ ಉಪನಾಯಕ ಚೇತನ್ ವಿಕಾಸ್. ಮೇಘನಾ ಹಾಗೂ ಆವಂತಿಕ ಈ ತಂಡದ ರಾಯಭಾರಿಗಳು.

 

"ಅಮ್ಮಾಸ್ ಫುಡ್" ಶ್ರೀನಿಧಿ ಅವರ ಮಾಲೀಕತ್ವದ "ಗ್ಯಾಂಗ್ ಗರುಡಾಸ್" ತಂಡದ ನಾಯಕನಾಗಿ ಮಾಸ್ಟರ್ ಆನಂದ್ ಹಾಗೂ ಉಪನಾಯಕನಾಗಿ ಕರಿಬಸವ ಇದ್ದಾರೆ. ತನಿಶಾ, ಪಲ್ಲವಿ ಗೌಡ ಹಾಗೂ ದ್ರವ್ಯ ಶೆಟ್ಟಿ ಈ ತಂಡದ ರಾಯಭಾರಿಗಳು.

 

ಪ್ರಧಾನ್ ಟೀವಿಯ ಪ್ರಶಾಂತ್ ಹಾಗೂ ನಾಗಶ್ರೀ ಮಾಲೀಕರಾಗಿರುವ "ಚಾಂಪಿಯನ್ ಚೀತಸ್" ತಂಡದ ನಾಯಕನಾಗಿ ಹೇಮಂತ್ ಹಾಗೂ ಮಂಜು ಪಾವಗಡ ಉಪನಾಯಕನಾಗಿದ್ದಾರೆ.  ವಿಜಯಲಕ್ಷ್ಮಿ, ಯಶಸ್ವಿನಿ  ಮತ್ತು ಜಾಹ್ನವಿ ಈ ತಂಡದ ರಾಯಭಾರಿಗಳು.

 

ಕಿರೀಟಿ ವೆಂಚರ್ ನ ಕುಶಾಲ್ ಗೌಡ ಮಾಲೀಕತ್ವದ "ಗಜಪಡೆ ವಾರಿಯರ್ಸ್" ತಂಡದ ನಾಯಕನಾಗಿ ವಿವಾನ್ ಹಾಗೂ ಉಪನಾಯಕನಾಗಿ ಶ್ರೀರಾಮ್ ಇದ್ದಾರೆ.  ವರ್ಷಿತಾ, ಅಮೂಲ್ಯ ಹಾಗೂ ಅನಿಕಾ ಈ ತಂಡದ ರಾಯಭಾರಿಗಳಾಗಿದ್ದಾರೆ.

 

 ಎರಡು ದಿನಗಳ ಕಾಲ "ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4" ರ ಪಂದ್ಯಗಳು ನಡೆಯಲಿದೆ. ಪಂದ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಫೌಂಡರ್ ದೀಪಕ್ ತಿಳಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,