ಕನ್ನಡ ನಾಡಿನ ಹಿರಿಮೆ ಸಾರುವ ಮೊದಲ ಮಿಡಿತ
ಹಿರಿಯ ನಿರ್ದೇಶಕ ಭಗವಾನ್ ಬಳಿ ತರಭೇತಿ ಪಡೆದುಕೊಂಡಿರುವ ಹರಿಚೇತ್ ‘ಮೊದಲ ಮಿಡಿತ’ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮಾಡುವ ಜೊತೆಗೆ ಹರೀಶ್‌ಡ್ಯಾಮಿ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಪ್ರೀತಿಗಷ್ಟೇ ಜಾಗವಿಲ್ಲದೆ ತಂದೆ-ತಾಯಿ ಮಗನ ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ನಾಲ್ಕು ಹಾಡುಗಳು, ಫೈಟ್‌ಗಳು ಇರಲಿದೆ. ಹಾಗೂ ಕನ್ನಡ ನಾಡು ಶಾಂತಿಯ ಬೀಡು, ನಮ್ಮಯ ಉಸಿರೇ ಕಾವೇರಿ ನೀರು ಎಂಬ ಸಾಹಿತ್ಯ ಇರುವ ಗೀತೆ ಮೊನ್ನೆ ಬಿಡುಗಡೆಗೊಂಡಿತು.
ಶ್ರೀಮಂತ ಹುಡುಗನಾಗಿ, ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಹೋರಾಡಿ, ಕೊನೆಗೆ ಅದರಿಂದ ಗೆದ್ದು ಬರುವ ಹುಡುಗನಾಗಿ ನಿಮಿಷ್‌ಸಾಗರ್ ನಾಯಕ. ಮುಗ್ದ ಹುಡುಗಿಯಾಗಿ ರಶ್ಮಿತಾರೋಜಾ ನಾಯಕಿ. ಉಳಿದಂತೆ ಕೆಂಪೆಗೌಡ, ತಬಲಾನಾಣಿ, ಸಂಗೀತ, ಟಿ.ಎಸ್.ನಾಗಾಭರಣ, ಅರವಿಂದ್, ಭಾಸ್ಕರ್‌ಶೆಟ್ಟಿ ಮುಂತಾದವರ ನಟನೆ ಇದೆ. ನಾಲ್ಕು ಫೈಟುಗಳಿಗೆ ಡಿಫರೆಂಟ್ ಡ್ಯಾನಿ-ಅಲ್ಟಿಮೇಟ್ ಶಿವು-ಜಾಗ್ವಾರ್‌ಸಣ್ಣ ಸಾಹಸ ಸಂಯೋಜನೆ ಇದೆ. ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ಹಾಸನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ಇದೇ ಶುಕ್ರವಾರದಂದು ತೆರೆಕಾಣುತ್ತಿದೆ.