ಕಲ್ಯಾಣ ಕುವರ ಐತಿಹಾಸಿಕ ಚಿತ್ರ
‘ಡಾ.ಬಿ.ಆರ್.ಅಂಬೇಡ್ಕರ್’ ಚಿತ್ರ ನಿರ್ಮಿಸಿ ನಟನೆ ಮಾಡಿದ್ದ ಬಿ.ಜಿ.ವಿಷ್ಣುಕಾಂತ್ ಗ್ಯಾಪ್ ತರುವಾಯ ‘ಕಲ್ಯಾಣ ಕುವರ’ ಎನ್ನುವ ಧಾರ್ಮಿಕ, ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗತಕಾಲ ಬೀದರ್‌ನಲ್ಲಿ ನಿಜಾಮರ ಆಳ್ವಿಕೆ ಇದ್ದ ಕಾಲದಲ್ಲಿ ಕನ್ನಡ ಭಾಷೆಯ ಬಳಕೆ ವಿರಳವಾಗಿತ್ತು. ಅಂಥ ಜಾಗದಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿದ ಡಾ.ಚನ್ನಬಸವ ಪಟ್ಟದೇವರನ್ನು ಆಧುನಿಕ ಬಸವಣ್ಣ ಅಂತ ಕರೆಯುತ್ತಿದ್ದರು. ಜಾತಿ ಭೇದ ಭಾವ ತೊಡೆದುಹಾಕಿ ಎಲ್ಲಡೆ ಸಮಾನತೆಯ ಮಂತ್ರ ಸಾರುತ್ತ ಎಲ್ಲರಿಗೂ ಲಿಂಗದೀಕ್ಷೆ ನೀಡಿದ್ದರು. ಅಂತಹ ಕ್ರಾಂತಿಕಾರಿ ಹೋರಾಟಗಾರ, ಮಹಾತ್ಮನ ಜೀವನದ ಕಥೆಯೇ ಚಿತ್ರವಾಗಿದೆ. ಇವರ ಪಾತ್ರವನ್ನು ವಿಷ್ಣುಕಾಂತ್ ನಟಿಸುವ ಜತೆಗೆ ಆಕ್ಷನ್ ಕಟ್ ಹೇಳಿದ್ದಾರೆ.
ಹಿರಿಯ ನಟಿ ಭವ್ಯ ಅವರು ಜಯದೇವಿ ತಾಯಿ ಲಿಗಾಡೆಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿರಾದಾರ್, ಸಂಜುಬಸಯ್ಯ, ಕಿಶೋರ್ ಚಕ್ರವರ್ತಿ, ಭರತ್‌ವಿಷ್ಣುಕಾಂತ್, ಸಂಜಯ್‌ಸೂರಿ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಅಭಿಮಾನ್‌ರಾಯ್, ಛಾಯಾಗ್ರಹಣ ಗುಂಡ್ಲುಪೇಟೆ ಸುರೇಶ್ ಸೇರಿದಂತೆ ಮೂವರು ಛಾಯಾಗ್ರಾಹಕರು ಕೆಲಸ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಬಿಡುಗಡೆಗೊಂಡಿತು. ಚಿತ್ರವು ಸದ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.