*‘ಜೋಡರ್ನ್’ ಟ್ರೇಲರ್ ಬಿಡುಗಡೆ - ಡಿಸೆಂಬರ್ 30ಕ್ಕೆ ಸಿನಿಮಾ ರಿಲೀಸ್*
ವಿನೋದ್ ಧಯಾಳನ್ ನಿರ್ದೇಶನದ ‘ಜೋಡರ್ನ್’ ಸಿನಿಮಾ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಹೇಂದ್ರ ಪ್ರಸಾದ್, ಕವಲು ದಾರಿ ಖ್ಯಾತಿಯ ಸಂಪತ್ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಡಿಸೆಂಬರ್ 30ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಚಿತ್ರತಂಡ ಬಿಡುಗಡೆ ಮಾಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಿರ್ದೇಶಕ ವಿನೋದ್ ಧಯಾಳನ್ ಮಾತನಾಡಿ ಅಮೇರಿಕನ್ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡನ್ ಹೇಳಿರುವ ‘ವೈಫಲ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫಲರಾಗುತ್ತಾರೆ ಆದರೆ ಪ್ರಯತ್ನ ಪಡದೇ ವೈಫಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಕೌಟುಂಬಿಕ ಕಥಾಹಂದರ ಒಳಗೊಂಡ ಸ್ಪೂರ್ತಿದಾಯಕ ಸಿನಿಮಾವಾಗಿದೆ. ಕಥೆಯೇ ಈ ಚಿತ್ರದ ಹೀರೋ. ಕಾಮಿಡಿ ಕಿಲಾಡಿ ಖ್ಯಾತಿಯ ಮಹೇಂದ್ರ ಪ್ರಸಾಧ್ ಹಾಗೂ ಸಂಪತ್ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿಕೊಂಡಿದ್ದೆ ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕಟೆಂಟ್ ಗೆ ಏನು ಬೇಕೋ ಅದನ್ನು ಮಾಡಿದ್ದೇವೆ. ಔಟ್ ಪುಟ್ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಮಹೇಂದ್ರ ಪ್ರಸಾದ್ ಮಾತನಾಡಿ ನಾನು ಚಿತ್ರದಲ್ಲಿ ಮೈಕಲ್ ಪಾತ್ರವನ್ನು ಮಾಡಿದ್ದೇನೆ. ತಂದೆ ಮಗನ ಬಾಂದವ್ಯ ಚಿತ್ರದಲ್ಲಿದೆ. ಇದು ನಾನು ನಟಿಸಿದ ಮೊದಲ ಸಿನಿಮಾ. ಈ ಸಿನಿಮಾ ಮುಗಿಯುವವರೆಗೆ ಯಾವ ಚಿತ್ರವನ್ನು ನಾನು ಒಪ್ಪಿಕೊಂಡಿಲ್ಲ. ಆ ಪಾತ್ರದಲ್ಲೇ ತಲ್ಲೀನನಾಗಿದ್ದೆ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ತಿಳಿಸಿಕೊಟ್ಟು ನನ್ನಿಂದ ಅಭಿನಯ ಮಾಡಿಸಿದ್ದಾರೆ. ಡಿಸೆಂಬರ್ 30 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.
ಸಂಪತ್ ಮೈತ್ರೇಯ ಮಾತನಾಡಿ ಚಿತ್ರದಲ್ಲಿ ನನಗೆ ಒಂದು ಒಳ್ಳೆಯ ಪಾತ್ರ ಕೊಟ್ಟಿದ್ದಕ್ಕೆ ಚಿತ್ರದ ನಿರ್ದೇಶಕ, ನಿರ್ಮಾಪಕರು ಹಾಗೂ ಸಾಯಿ ಸರ್ವೇಶ್ ಅವರಿಗೆ ಧ್ಯನ್ಯವಾದ ತಿಳಿಸುತ್ತೇನೆ. ನನ್ನ ಸ್ನೇಹಿತರೊಬ್ಬರ ಮೂಲಕ ಈ ಸಿನಿಮಾ ನನಗೆ ಸಿಕ್ಕಿತು. ತುಂಬಾ ಒಳ್ಳೆ ಕಟೆಂಟ್ ಇರೋ ಸಿನಿಮಾ. ಈ ವರ್ಷದ ಕೊನೆಯಲ್ಲಿ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಈ ಸಿನಿಮಾ ನೋಡುವ ಮೂಲಕ ಹೊಸ ವರ್ಷ ಆಚರಣೆ ಮಾಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡ್ರು.
ಸೀತಾರ, ಸುನೀಲ್, ಯೋಗೇಶ್ ಶಂಕರ್ ನಾರಾಯಣನ್, ಗಣೇಶ್ ಜೈ ಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ನೋ ನಾನ್ಸೆನ್ಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಜೆ.ಜಾನಕಿರಾಮ್, ಎನ್ ಆರ್.ಪಾಟೀಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೈಕುಮಾರ್ ಜೆ ಸ್ಟಾಲಿನ್ ಛಾಯಾಗ್ರಹಣ, ಸಾಯಿ ಸರ್ವೇಶ್ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ, ನಿರಂಜನ್ ದೇವರಮನೆ ಸಂಕಲನ ಜೋರ್ಡನ್ ಚಿತ್ರಕ್ಕಿದೆ.