ರೋನಿ ಮೋಷನ್ ಪೋಸ್ಟರ್,ಟೀಸರ್ ಬಿಡುಗಡೆ
ವಿಭಿನ್ನ ಕಥಾಹಂದರ ಹೊಂದಿರುವ ’ರೋನಿ’ ಚಿತ್ರದ ಮೋಷನ್ ಪೋಸ್ಟರ್‌ನ್ನು ಪ್ರಜ್ವಲ್‌ದೇವರಾಜ್ ಮತ್ತು ಟೀಸರ್‌ನ್ನು ಖ್ಯಾತ ನಿರ್ಮಾಪಕಿ ಶೈಲಜಾನಾಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ.ರಮೇಶ್ ಹಾಗೂ ಪವನ್‌ಕುಮಾರ್ ಮೊದಲಬಾರಿ ಕನ್ನಡ ಚಿತ್ರಕ್ಕೆ ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ಕಿರಣ್.ಆರ್.ಕೆ ಅವರ ಕಥೆ,ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವಿದೆ. ’ದ ಹಂಟರ್’ ಅಂತ ಅಡಿಬಹರದಲ್ಲಿ ಹೇಳಲಾಗಿದೆ.
ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂದವೇನು? ಈಕೆಗೆ ನ್ಯಾಯ ಸಿಗುತ್ತದಾ? ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ.
ಧರ್ಮಕೀರ್ತಿರಾಜ್ ನಾಯಕ. ಬಾಂಬೆ ಮೂಲದ ರುತ್ವಿಪಟೇಲ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ತಿಲಕ್, ಉಳಿದಂತೆ ಕೀರ್ತಿರಾಜ್, ವರ್ದನ್, ರಘುಪಾಂಡೇಶ್ವರ್, ಬಲರಾಜವಾಡಿ, ರತನ್‌ಕರತಮಾಡ ಮುಂತಾದವರು ನಟಿಸಿದ್ದಾರೆ. ಹಾಗೂ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ. ಕವಿರಾಜ್-ಕಿನ್ನಾಳ್‌ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀನಸ್‌ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ಸಾಹಸ ಕುಂಗುಫು ಚಂದ್ರು, ತಾಂತ್ರಿಕ ಮುಖ್ಯಸ್ಥ ಧರಂ.ಕೆ.ಸವ್‌ಲಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ. ಇದೇ ಸಂಸ್ಥೆಯು ಮತ್ತೋಂದು ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು ಪ್ರಜ್ವಲ್‌ದೇವರಾಜ್ ನಾಯಕರಾಗಿ ಆಯ್ಕೆಯಾಗಿದ್ದಾರೆ.