ಸ್ವಾತಂತ್ರಪೂರ್ವ ಕಥನ ಪುಟ್ಟ ಭಯ
ಸಾಯಿ ಚಿತ್ರಂ ಪ್ರೊಡಕ್ಸನ್ಸ್ ಲಾಂಛನದಲ್ಲಿ ಜನಾರ್ಧನ ನಾಯಕ್ ನಿರ್ಮಿಸಿರುವ “ಪುಟ್ಟ ಭಯ” ಮಕ್ಕಳ ಚಿತ್ರವು ಸ್ವಾತಂತ್ರ ಪೂರ್ವ ಕಥೆಯನ್ನು ಹೊಂದಿದೆ. ರಚನೆ,ಚಿತ್ರಕಥೆ,ಸಂಭಾಷಣೆ,ಸಂಗೀತ,ಸಾಹಿತ್ಯ ಮತ್ತು ನಿರ್ದೇಶನವನ್ನು ನವ್ಯ.ಜಿ.ನಾಯಕ್ ನಿರ್ವಹಿಸಿದ್ದಾರೆ. ಕಥೆಯಲ್ಲಿ ಚಿಕ್ಕ ವಯಸ್ಸಿಗೆ ಮದುವೆಯಾದ ದಂಪತಿಗೆ ಹೆಣ್ಣು ಮಗುವೊಂದು ಜನನವಾಗುತ್ತದೆ. ಮುಂದೆ ಒಂದು ಹಂತದಲ್ಲಿ ಮಗುವಿಗೆ ಭಯ ಮೂಡುತ್ತದೆ. ಅದು ಯಾರಿಂದ ಬರುತ್ತದೆ? ಇದಕ್ಕೆ ಕಾರಣ ಏನು? ಹೇಗೆ ಆವರಿಸುತ್ತದೆ? ಯಾವುದರ ಬಗ್ಗೆ ಭಯ ಹುಟ್ಟುತ್ತೆ? ತಾಯಿ ಮಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬಂಥ ವಿಷಯಗಳು ಸನ್ನಿವೇಶದ ಮೂಲಕ ಕುತೂಹಲ ಹುಟ್ಟಿಸುತ್ತದೆ.
ದಂಪತಿಗಳಾಗಿ ರಾಘವ್‌ಶೆಟ್ಟಿ-ಅನನ್ಯಮೋಹನ್, ಬೇಬಿ ಸಮೃದ್ದಿ, ಶಿಲ್ಪಶೆಟ್ಟಿ, ಅಜ್ಜಿಯಾಗಿ ಸುಂದರಶ್ರೀ, ಅಂಬುಜಮ್ಮ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ರೋಹಿತ್‌ಅಂಪರ್-ನಾಗೇಂದ್ರನಾಯಕ್-ಇರ‍್ಮಾನ್‌ಅಲಿ-ವಾಗೀಶ, ಸಂಕಲನ ಹರೀಶ್‌ಕಿರಣ್‌ತುಂಗ-ಪ್ರತೀಶ್‌ಕಾಪು ಅವರದಾಗಿದೆ. ಭಟ್ಕಳ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆಗೆ ಒಳಪಟ್ಟು ‘ಯು’ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾಧ್ಯತೆ ಇದೆ.