ವಾಮಾಚಾರ ಕುರಿತಾದ ಗದಾಯುದ್ದ
ಉತ್ತರ ಕರ್ನಾಟಕದ ನಿತಿನ್‌ಶಿರಗುರ್‌ಕರ್ ನಿರ್ಮಾಣ ಮಾಡಿರುವ ‘ಗದಾಯುದ್ದ’ ಚಿತ್ರವು ವಾಮಾಚಾರಿ ಕುರಿತಾಗಿದೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮಾನವರ ಜೀವ ತೆಗೆಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ನಾಯಕನ ರೂಪದಲ್ಲಿ ಮರುಜನ್ಮ ತೆಳೆದ ಭೀಮ ಗದಾಯುದ್ದದ ಮೂಲಕ ಹೇಗೆ ಇಂಥವರನ್ನು ಸದೆಬಡಿಯುತ್ತಾನೆ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನು ಇಟ್ಟುಕೊಂದು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿರುತ್ತದೆ.
ಶ್ರೀವತ್ಸ ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಪ್ಪನ ಸಿನಿಮಾಕ್ಕೆ ಸುಮಿತ್ ನಾಯಕ. ಧನ್ಯಪಾಟೀಲ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ಐಶ್ವರ್ಯಸಿಂದೋಗಿ, ವಾಮಾಚಾರಿಯ ಪಾತ್ರಕ್ಕೆ ಡ್ಯಾನಿಕುಟ್ಟಪ್ಪ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸ್ಪರ್ಶಾರೇಖಾ, ಶರತ್‌ಲೋಹಿತಾಶ್ವ, ಯತಿರಾಜ್, ಸತ್ಯಜಿತ್, ಶಿವರಾಂ ಮುಂತಾದವರು ನಟಿಸಿದ್ದಾರೆ. ಆಂಜನೇಯನ ಪಾತ್ರವನ್ನು ಚಿರಂಜೀವಿಸರ್ಜಾ ಮಾಡಬೇಕಿತ್ತು. ಆದರೆ ಅವರು ಇಹಲೋಹ ತ್ಯಜಿಸಿದ್ದರಿಂದ ಗ್ರಾಫಿಕ್ಸ್‌ದಲ್ಲಿ ದೇವರನ್ನು ತೋರಿಸಲಾಗಿದೆ.
ಸಾಲೋಮನ್ ಸಂಗೀತ, ಸುರೇಶಬಾಬು ಛಾಯಾಗ್ರಹಣ ಇರಲಿದೆ. ‘ಅಕ್ಕಿಬೇಳೆ ಡಬ್ಬ ಹುಡುಕುತ್ತೆ ಕೈಯಿ’ ಎಂದು ಸಾಧುಕೋಕಿಲ ಹೇಳುವ ಕುಡುಕರ ಸುಪ್ರಭಾತದ ಹಾಡು ಬಿಡುಗಡೆಯಾಗಿ ವೈರಲ್ ಆಗಿದೆ.