ಸಂಬಂಧಗಳ ಜತೆಗೆ ಭಾವನೆಗಳ ಹೂರಣ
ಮಂಜುಕಾರ್ತಿಕ್ ರಚಿಸಿ ನಿರ್ದೇಶನ ಮಾಡಿರುವ ‘ಮಲೋಡಿ ಡ್ರಾಮ’ ಚಿತ್ರದ ಕಥೆಯು ಪಯಣದಲ್ಲಿ ಸಾಗುವ ಸುಮಧುರ ಬಾಂಧವ್ಯದಲ್ಲಿ ಸಾಗುತ್ತದೆ. ಪ್ರೀತಿ ಭಾವನೆಗಳ ಜತೆಗೆ ಸಂಬಂಧಗಳು ಹೇಗಿರಬೇಕು. ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ ಎನ್ನುವಂತ ವಿಷಯವನ್ನು ಹೇಳ ಹೊರಟಿದೆ. ‘ನಿನ್ನ ಕಥೆ ನನ್ನ ಜೊತೆ’ ಎಂಬ ಅಡಿಬರಹವಿದೆ. ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡರೆಡ್ಡಿ ಬಂಡವಾಳ ಹೂಡಿದ್ದಾರೆ.
ಸತ್ಯ ನಾಯಕನಾಗಿ ಎರಡನೇ ಅವಕಾಶ. ‘ಸೀತಾವಲ್ಲಭ’ ಹಾಗೂ ‘ಸರಸು’ ಧಾರವಾಹಿಗಳ ಮೂಲಕ ಗುರುತಿಸಿಕೊಂಡಿರುವ ಸುಪ್ರಿತಾಸತ್ಯನಾರಾಯಣ್ ನಾಯಕಿ. ಉಳಿದಂತೆ ರಂಗಾಯಣರಘು, ಅನುಪ್ರಭಾಕರ್, ರಾಜೇಶ್‌ನಟರಂಗ, ಬಲರಾಜವಾಡಿ, ಲಕ್ಷಿಸಿದ್ದಯ್ಯ, ಅಶ್ವಿನ್‌ಹಾಸನ್, ವೈಭವ್‌ನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ. ಜಯಂತ್‌ಕಾಯ್ಕಣಿ, ಡಾ.ವಿ.ನಾಗೇಂದ್ರಪ್ರಸಾದ್, ಧನಂಜಯ್‌ರಂಜನ್ ಸಾಹಿತ್ಯದ ಏಳು ಗೀತೆಗಳಿಗೆ ಕಿರಣ್‌ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಸೋನುನಿಗಮ್, ಕೈಲಾಶ್‌ಖೇರ್, ಪಲಾಕ್‌ಮುಚ್ವಲ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಛಾಯಾಗ್ರಹಣ ಮನು.ಡಿ.ಬಿ.ಹಳ್ಳಿ, ಸಂಕಲನ ಆರ್.ಮಂಜು ಅವರದಾಗಿದೆ. ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ ಪಡೆದಿರುವ ಸಿನಿಮಾವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.