ಜನರ ಎದುರು ಪಿಂಕಿ ಎಲ್ಲಿ?
ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ ಆಧಾರಿತ ‘ಪಿಂಕಿ ಎಲ್ಲಿ?’ ಚಿತ್ರವು ಮಗುವೊಂದು ಕಾಣೆಯಾಗಿದ್ದರೂ, ಕಥೆಯು ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಮಗುವಿನ ಭವಿಷ್ಯಕ್ಕಾಗಿ ತಂದೆ-ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ ಎಂಬುದು ಒಂದೆಳೆ ಸಾರಾಂಶವಾಗಿದೆ. ಇದನ್ನು ಮೆಚ್ಚಿಕೊಂಡ ಕೃಷ್ಣೆಗೌಡ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪೃಥ್ವಿಕೋಣನೂರು ಸುಮಾರು ಮೂರು ವರ್ಷಗಳ ಹಿಂದೆ ಕಥೆ ಬರೆದಿದ್ದು, ಈಗ ಚಿತ್ರರೂಪದಲ್ಲಿ ಮೂಡಿಬಂದಿದೆ.
ನವ ಪ್ರತಿಭೆ ಗುಂಜಲಮ್ಮ ಮತ್ತು ಸಂಗಮ್ಮ ಎನ್ನುವ ಇಬ್ಬರು ಸ್ಲಂ ನಿವಾಸಿಗಳು ಅಭಿನಯಿಸಿರುವುದು ವಿಶೇಷ. ಉಳಿದಂತೆ ಅಕ್ಷತಾಪಾಂಡವಪುರ, ದೀಪಕ್‌ಸುಬ್ರಹ್ಮಣ್ಯ, ಪೃಥ್ವಿ ಮುಂತಾದವರು ನಟಸಿದ್ದಾರೆ. ಈಗಾಗಲೇ ಹಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಮತ್ತು ಪ್ರಶಂಸೆ ಪಡೆದುಕೊಂಡಿದೆ. ಇದೇ ಜೂನ್ ೨ರಂದು ಸಿನಿಮಾವು ರಾಜ್ಯಾದ್ಯಂತ ತೆರೆಗೆ ಬರಲು ಅಣಿಯಾಗಿದೆ.