Raktaksha.Film News

Thursday, May 25, 2023

227

ಮಾಡಲಿಂಗ್ ಹುಡುಗ ಈಗ ನಾಯಕ

       ಮಾಡಲಿಂಗ್‌ದಲ್ಲಿ ಮಿಂಚಿರುವ ಹಲವು ಪ್ರತಿಭೆಗಳು ಕ್ರಮೇಣವಾಗಿ ಚಿತ್ರರಂಗಕ್ಕೆ ಬರುವುದು ವಾಡಿಕೆಯಾಗಿದೆ. ಆ ಸಾಲಿಗೆ ರೋಹಿತ್ ‘ರಕ್ತಾಕ್ಷ’ ಚಿತ್ರವನ್ನು ಸಾಯಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣ ಮಾಡುವ ಜತೆಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಶೀರ್ಷಿಕೆ ಗೀತೆಗೆ ಧ್ವನಿಯಾಗಿರುವ ನಟ ವಸಿಷ್ಠಸಿಂಹ, ಸಾಹಿತ್ಯ ಸುಜಿತ್‌ವೆಂಕಟರಾಮಯ್ಯ, ಧೀರೇಂದರ್‌ದಾಸ್ ದೊಸ್ಮೋಡ ಸಂಗೀತದ ಹಾಡಿನ ಬಿಡುಗಡೆ ಕಾರ್ಯಕ್ರಮ ಮೊನ್ನೆ ನಡೆಯಿತು.

      ಈ ಕುರಿತಂತೆ ಮಾತನಾಡಿರುವ ರೋಹಿತ್, ಬಾಲ್ಯದಿಂದಲೂ ಕಲಾವಿದ ಆಗಬೇಕಂಬ ಕನಸಿತ್ತು. ಅದು ಈಗ ನನಸಾಗಿದೆ. ಪಾತ್ರಕ್ಕಾಗಿ ಎರಡರಿಂದ ಮೂರು ಬಾರಿ ಬಾಡಿ ಟ್ರಾನ್ಸ್‌ಫಾರ್ಮೆಶನ್ ಮಾಡಿದ್ದೇನೆ. ರೀಲ್ ಹೀರೋ ಆಗಲು ಬಂದಿಲ್ಲ. ರಿಯಲ್ ಹೀರೋ ಆಗಲು ಬಂದಿದ್ದೇನೆ. ನನ್ನ ಕೆಲಸ ಮುಖಾಂತರ ಎಲ್ಲರಿಗೂ ಪರಿಚಯವಾಗಬೇಕು. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ನನ್ನ ಕೈಯಲ್ಲಾದ ಅವಕಾಶ ಕೊಡುತ್ತೇನೆ. ಕೆಲವೊಂದು ಸತ್ಯಘಟನೆಯನ್ನು ಬಳಸಿಕೊಳ್ಳಲಾಗಿದೆ ಎಂದರು.

      ಸಿನಿಮಾವು ಮಾಸ್ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ ಎನ್ನುತ್ತಾರೆ ನಿರ್ದೇಶಕ ವಾಸುದೇವ.ಎಸ್.ಎನ್. ನಾಯಕಿಯಾಗಿ ರೂಪರಾಯಪ್ಪ ಉಳಿದಂತೆ ಅರ್ಚನಾಕೊಟ್ಟಿಗೆ, ಪ್ರಮೋದ್‌ಶೆಟ್ಟಿ, ರಚನಾದಶರಥ್, ಗುರುದೇವ್‌ನಾಗರಾಜ, ವಿಲಾಸ್‌ಕುಲಕರ್ಣಿ, ಶಿವಮೊಗ್ಗರಾಮಣ್ಣ ಮುಂತಾದವರು ನಟಿಸಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,