Agrasena.Film News

Thursday, June 08, 2023

190

 

ಅಗ್ರಸೇನಾ ಟ್ರೈಲರ್ ಡಾಲಿ ಧನಂಜಯ್ ಬಿಡುಗಡೆ

    

 ಇದೇ‌ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿರುವ,   ಶ್ರೀಮತಿ ಮಮತಾ ಜಯರಾಮರೆಡ್ಡಿ ಅವರ ನಿರ್ಮಾಣದ, ಮುರುಗೇಶ್ ಕಣ್ಣಪ್ಪ ಅವರ ನಿರ್ದೇಶನದ  ’ಅಗ್ರಸೇನಾ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ, ನಿರ್ಮಾಪಕ  ಡಾಲಿ  ಧನಂಜಯ್ ಅವರು ಟ್ರೈಲರ್ ರಿಲೀಸ್ ಮಾಡಿ ಮಾತನಾಡುತ್ತ,ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಿರ್ದೇಶಕರು ನಮ್ಮ ಅರಸೀಕೆರೆಯವರು, ಒಂದು ಹೊಸ ತಂಡಕ್ಕೆ ಮಾರಲ್ ಸಪೋರ್ಟ್ ಮಾಡಲು ಬಂದಿದ್ದೇನೆ ಎಂದರು.

 ಅಮರ್ ವಿರಾಜ್ ಹಾಗೂ  ರಚನಾ ದಶರಥ್  ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ  ಅಗಸ್ತ್ಯ ಬೆಳಗೆರೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ,  ಹಿರಿಯನಟ ರಾಮಕೃಷ್ಣ ಅವರು ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದು ಅವರ ೨೦೦ನೇ ಚಿತ್ರ ಎನ್ನುವುದು ವಿಶೇಷ. ಭಜರಂಗಿ ಹರ್ಷ  ಜೊತೆ ಕೆಲಸ ಮಾಡಿರುವ  ಮುರುಗೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ನಂತರ ನಿರ್ಮಾಪಕ ಜಯರಾಂ ರೆಡ್ಡಿ ಮಾತನಾಡಿ ಟ್ರೈಲರ್ ತುಂಬಾ ಚೆನ್ನಾಗಿ ಬಂದಿದೆ. ೨೩ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಸ ತಂಡಕ್ಕೆ ಪ್ರೋತ್ಸಾಹಿಸಿ, ಡಾಲಿ ಧನಂಜಯ ಅವರು ಆಗಮಿಸಿದ್ದು ಒಂದು ಶಕ್ತಿ ಬಂದಂತಾಯ್ತು ಎಂದರು. ನಂತರ ಮಮತಾ ರೆಡ್ಡಿ ಮಾತನಾಡಿ ವಿಜಯ ಪ್ರಕಾಶ್ ಅವರು ದಸರಾ ಸಾಂಗನ್ನು ರಿಲೀಸ್ ಮಾಡಿದ್ದರು. ಶಿವಣ್ಣ ಊರೆಲ್ಲಾ ಹಾಡನ್ನು ಬಿಡುಗಡೆ ಮಾಡಿದ್ದರು. ಈಗ ಡಾಲಿ ಅವರು ಟ್ರೈಲರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸಿನಿಮಾನ ಆಶೀರ್ವದಿಸಿ ಎಂದರು.

  ನಿರ್ದೇಶಕ ಮುರುಗೇಶ್  ಮಾತನಾಡಿ ಡಾಲಿ ಅವರು ಹೊಸ ಟೀಮ್ ಗೆ ಬಂದು ಸಪೋರ್ಟ್ ಮಾಡಿದ್ದರೆ.ಆಕ್ಷನ್ ಫ್ಯಾಮಿಲಿ, ಲವ್, ಸೆಂಟಿಮೆಂಟ್ ಎಲ್ಲಾ ರೀತಿಯ ಅಂಶಗಳು ನಮ್ಮ ಚಿತ್ರದಲ್ಲಿವೆ ಎಂದರು.

 ಅಗಸ್ಯ್ಯ ಮಾತನಾಡಿ ಡಾಲಿ ಅವರು ಬಂದದ್ದು ನಮಗೆ  ಆನೆಬಲ‌ ಬಂದಂತಾಗಿದೆ. ಡಬಲ್ ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತದೆ ಎಂದರು.

  ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ನಲ್ಲಿ ಸಾಗುತ್ತದೆ. ರಾಮಕೃಷ್ಣ ಅವರ ಪಾತ್ರಕ್ಕೂ ಎರಡು ಶೇಡ್ ಇದೆ.

   ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಅವರು ಚಿತ್ರದಲ ೬ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ.  ನಾಯಕ ಅಮರ್ ವಿರಾಜ್ ಮಾತನಾಡಿ ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ನಮ್ಮ ಚಿತ್ರದ ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ನಾನು ಸಿಟಿಯ ಭಾಗದಲ್ಲಿ ಬರುತ್ತೇನೆ ಎಂದರು.

    ಆರ್.ಪಿ.ರೆಡ್ಡಿ  ಅವರ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ನಿರ್ದೇಶನ, ಚೇತನ್ ಕುಮಾರ್, ಗೌಸ್‌ಪೀರ್, ವಿಜಯ್, ಶಿವು ಬೆರಗಿ ಅವರ ಸಾಹಿತ್ಯ,  ವಿಜಯ್ ಎಂ. ಕುಮಾರ್ ಅವರ  ಸಂಕಲನ ಈ ಚಿತ್ರಕ್ಕಿದೆ. ಭಾರತಿ ಹೆಗ್ಡೆ ಅಲ್ಲದೆ ನಿರ್ಮಾಪಕರ ಪುತ್ರಿ ತನಿಶರೆಡ್ಡಿ ಸಹ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,