ಲವ್ ಲಿಗೆ ತಾರೆಗಳು ಸಾಥ್
‘ಲವ್ ಲಿ’ ಚಿತ್ರದ ಶೀರ್ಷಿಕೆ ಗೀತೆಯನ್ನು ರವಿಚಂದ್ರನ್, ಉಪೇಂದ್ರ, ಲವ್ಲಿಸ್ಟಾರ್ ಪ್ರೇಮ್, ಪ್ರಿಯಾಂಕ ಉಪೇಂದ್ರ ಮತ್ತು ಹರಿಪ್ರಿಯಾ ಬಿಡುಗಡೆ ಮಾಡಿದರು. ರವಿಚಂದ್ರನ್ ಮಾತನಾಡಿ ಲವ್ವಲ್ಲಿ ಇದ್ರೆ, ಎಲ್ಲಾ ಲವ್ ಲಿ ಆಗಿರುತ್ತೆ. ಹೊಸಬರಲ್ಲಿ ಒಂದು ಹೊಸ ಉತ್ಸಾಹ ಇದೆ ಎಂದರು. ಉಪೇಂದ್ರ ಹೇಳುವಂತೆ ಹಾಡು ಆಸಕ್ತಿ ಹುಟ್ಟಿಸುತ್ತೆ. ಅಲ್ಲದೆ ಚಿತ್ರ ನೋಡಬೇಕು ಅನಿಸುತ್ತೆ ಎನ್ನುತ್ತಾರೆ. ನಾನಿಷ್ಟ ಪಡುವಂಥ ಲವ್ಲಿ ಮನಸುಗಳೇ ಸೇರಿ ಇದನ್ನು ಮಾಡಿದ್ದಾರೆ. ಡ್ಯಾನ್ಸ್ ಕಲಿಸುವ ಹುಡುಗ ಕೇಶವ್ ನಿರ್ದೇಶನ ಮಾಡುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ. ಒಳ್ಳೆಯ ಕ್ವಾಲಿಟಿ ಇರುವಂಥ ಚಿತ್ರ. ರವಿಸರ್, ಉಪೇಂದ್ರರಿಂದ ಸಾಕಷ್ಟು ಕಲಿತಿದ್ದೇನೆ ಎಂಬುದು ಪ್ರೇಮ್ ನುಡಿ.
ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಇಲ್ಲಿ ನನಗೆ ಪ್ರಥಮ ಅನುಭವ. ಬೆಂಗಳೂರು ಹೋಮ್ಟೌನ್ ಇದ್ದಂತೆ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ್ದೇನೆಂದು ಖುಷಿಯಾಗುತ್ತದೆ. ಜನನಿ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆಂದು ನಾಯಕಿ ಸ್ಟೆಫಿಪಟೇಲ್ ಕನ್ನಡದಲ್ಲಿ ಮಾತನಾಡಿದರು.
ಕಥೆ ಕೇಳಿ ಇಷ್ಟವಾಯಿತು. ನನ್ನನ್ನು ಕಾಡಿದಂತ ಸಿನಿಮಾ. ಹಾಡಿನಿಂದಲೇ ಪ್ರಮೋಷನ್ ಶುರು ಮಾಡಿದ್ದು, ಆಗಸ್ಟ್ದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಅಂತ ನಾಯಕ ವಸಿಷ್ಟಸಿಂಹ ಹೇಳಿದರು.
ಸಾಮಾಜಿಕ ಸಂದೇಶ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ರೌಡಿಸಂ, ಲವ್, ಡ್ರಾಮಾ, ಪ್ರೀತಿ, ನಂಬಿಕೆಯ ಮೇಲೆ ಸಂಬಂಧಗಳು ಎಷ್ಟು ಮುಖ್ಯ. ಅವುಗಳನ್ನು ಹೇಗೆ ಉಳಿಸಿಕೊಳ್ಳಬೇಕು. ಪ್ರೀತಿಯಲ್ಲಿ ಏನೆಲ್ಲಾ ಇರುತ್ತೆ ಎಂಬುದನ್ನು ಹೇಳ ಹೊರಟಿದೆ. ಮಂಗಳೂರು, ಬೆಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹಾಡು ಮಾತ್ರ ಬಾಕಿ ಇದೆ ಅಂತ ನಿರ್ದೇಶಕ ಚೇತನ್ಕೇಶವ ಮಾಹಿತಿ ನೀಡಿದರು. ಎಂ.ಆರ್.ರವೀಂದ್ರಕುಮಾರ್ ಬಂಡವಾಳ ಹೂಡಿದ್ದಾರೆ.