Darbar.Film Success Meet

Monday, June 12, 2023

177

 

ಪ್ರೇಕ್ಷಕರೇ ಗೆಲ್ಲಿಸಿದ ದರ್ಬಾರ್

 

  ನಮ್ಮದು ಹಳ್ಳಿಗಳ ದೇಶ, ಇಲ್ಲಿ ಮಾನವನ ಸಂಬಂಧಗಳಿಗೆ ಬೆಲೆಯಿದೆ.  ಪ್ರಮುಖವಾಗಿ ದೇಶದ ರಾಜಕೀಯ ಭವಿಷ್ಯ ನಿರ್ಧಾರವಾಗುವುದೇ ಈ ಹಳ್ಳಿಗಳಿಂದ.  ಹಾಗೆ ನೋಡಿದರೆ ಪ್ರತಿಯೊಬ್ಬರಿಗೂ ಹಳ್ಳಿಗಳೇ ಮೂಲ.  ಅವರು ಎಷ್ಟೇ ದೊಡ್ಡ ಮನುಷ್ಯರಾಗಿ ಬೆಳೆದಿದ್ರೂ, ಅವರ ಯಾವುದಾದರೂ ಒಂದು ಬೇರು ಹಳ್ಳಿಯಲ್ಲಿರುತ್ತದೆ, ಅಂಥಾ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ನಿರ್ಮಾಣವಾದ ಚಿತ್ರ ದರ್ಬಾರ್ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು,  ನಾಡಿನಾದ್ಯಂತ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಮುನ್ನಡೆಯುತ್ತಿದೆ.  ಗ್ರಾಮೀಣ ಭಾಗದಲ್ಲಿ ನಡೆಯುವ  ಚುನಾವಣಾ ರಾಜಕಾರಣವನ್ನು ಪ್ರಮುಖವಾಗಿಟ್ಟುಕೊಂಡು ತಯಾರಾಗಿರುವ  ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ  ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.  ಇನ್ನು ಈ ಚಿತ್ರದಲ್ಲಿ ಯುವಪ್ರತಿಭೆ ಸತೀಶ್ ಅವರು   ನಾಯಕನ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ.  ಜಾಹ್ನವಿ  ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ ಈ ಚಿತ್ರವನ್ನು  ಬಿ.ಎನ್. ಶಿಲ್ಪ ಅವರು ನಿರ್ಮಿಸಿದ್ದಾರೆ. ಗ್ರಾಮ ಪಂಚಾಯ್ತಿ  ಚುನಾವಣೆಯಲ್ಲಿ, ಹಣ ಹೆಂಡದ ಹೊಳೆ ಹರಿಸಿ, ಅಧಿಕಾರಕ್ಕೆ ಬಂದ ಪೊರ್ಕಿಯೊಬ್ಬ  ಇಡೀ ಹಳ್ಳಿಯನ್ನು ಹೇಗೆಲ್ಲ ಹಾಳು ಮಾಡುತ್ತಾನೆ ಎಂಬುದನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಲಾಗಿದೆ. ಅಲ್ಲದೆ ಹಳ್ಳಿಗಳಲ್ಲಿ  ರಾಜಕೀಯ  ಎನ್ನುವುದು ಹೇಗೆ ಆವರಿಸಿಕೊಂಡಿದೆ ಎಂಬುದರ ನೈಜ ಚಿತ್ರಣ ಇದರಲ್ಲಿದೆ.

   ಚಿತ್ರದ ಯಶಸ್ವಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಾಯಕ ಸತೀಶ್ ನಮ್ಮ ಚಿತ್ರ ಈ ಮಟ್ಟದಲ್ಲಿ  ಯಶಸ್ವಿಯಾಗಲು  ಮಾದ್ಯಮದ  ಸಹಕಾರ ತುಂಬಾ ದೊಡ್ಡದು. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರೆದು,  ಹೆಚ್ಚು ಜನ ಥೇಟರ್ ಕಡೆ ಬರುವಂತೆ ಪ್ರೇರೇಪಿಸಿದ್ದೀರಿ. ಸೋಮವಾರವಾದರೂ ಚಿತ್ರದ ಕಲೆಕ್ಷನ್ ಉತ್ತಮವಾಗಿದೆ ಎಂದರೆ ಅದಕ್ಕೆ ಮೀಡಿಯಾಗಳಲ್ಲಿ ಬಂದ ಪ್ರಾಮಾಣಿಕ ವಿಮರ್ಶೆಗಳೇ ಕಾರಣ. ಈಗಾಗಲೇ ಅನೇಕ ಗಣ್ಯರು ಸಿನೆಮಾ ನೋಡಿ ಮೆಚ್ಚು ನನಗೆ ಕಾಲ್ ಮಾಡುತ್ತಿದ್ದಾರೆ, ಶಾಸಕರಾದ ಶಿವಲಿಂಗೇಗೌಡರು ನಮ್ಮ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಈಗಷ್ಟೇ ಮಾಜಿ ಶಾಸಕರಾದ ಡಿಸಿ ತಮ್ಮಣ್ಣ ಅವರು ಚಿತ್ರ ನೋಡಿ ಕಾಲ್ ಮಾಡಿ  ತುಂಬಾ ನೈಜವಾಗಿ ಬಂದಿದೆ ಎಂದರು. ಇನ್ನು  ಉಪೇಂದ್ರ ಅವರೂ ಸಹ ಚಿತ್ರವನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಎ, ಬಿ ಸೆಂಟರ್‌ಗಳಲ್ಲಿ  ದರ್ಬಾರ್ ಚಿತ್ರವನ್ನು ರಿಲೀಸ್ ಮಾಡಿದ್ದೇವೆ. ಮುಂದಿನ ವಾರದಿಂದ ಇನ್ನೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು. ನಂತರ ವಿ.ಮನೋಹರ್ ಮಾತನಾಡಿ ಜೋಡಿ ಹಕ್ಕಿ, ಜನುಮದ ಜೋಡಿಯಂಥ ಗ್ರಾಮೀಣ ಪರಿಸರದ ಚಿತ್ರಗಳಿಗೆ ಮ್ಯೂಸಿಕ್ ಮಾಡಿದ್ದೆ. ಆ ಅನುಭವದಿಂದ ಈ ಚಿತ್ರ ನಿರ್ದೇಶನ ಮಾಡಿದೆ. ಸತೀಶ್ ತಮ್ಮ ಅನುಭವವನ್ನು ಈ ಸಿನಿಮಾಗೆ ಧಾರೆ ಎರೆದಿದ್ದಾರೆ. ಇದೆಲ್ಲವೂ ಸಿನಿಮಾ ಸಹಜವಾಗಿ ಮೂಡಿಬರಲು ಸಹಕಾರವಾಯ್ತು. ನೈಜವಾಗಿ ಬರೆದ ಸ್ಕ್ರಿಪ್ಟ್ ನನಗೆ ಇಷ್ಟವಾಯ್ತು ಎಂದರು.        ಚಿತ್ರ ನೋಡಿ ಇಷ್ಟಪಟ್ಟಿರುವ  ಪ್ರಭುತ್ವ ನಿರ್ಮಾಪಕ ಶಿವಕುಮಾರ್ ಮಾತನಾಡಿ ನಾನು ಪ್ರೊಡ್ಯೂಸರ್ ಆಗಿ ಬಂದಿಲ್ಲ, ಒಬ್ಬ  ಪ್ರೇಕ್ಷಕನಾಗಿ ಬಂದಿದ್ದೇನೆ. ಸಿನಿಮಾದ ನಿಜವಾದ ಹೀರೋ ಅಂದ್ರೆ ಡೈರೆಕ್ಟರ್, ಎಲ್ಲೂ  ಕ್ರಿಯೇಟ್ ಮಾಡಿದ ಸಬ್ಜೆಕ್ಟ್ ಅನಿಸೋದಿಲ್ಲ.  ತಿಥಿ ಥರಸ ಪಾತ್ರವನ್ನು ಹೇಳುವ ಸಿನಿಮಾ. ಕೊನೆಯಲ್ಲಿ ಪುನೀತ್ ರನ್ನು ನಾಯಕನ ಆದರ್ಶವಾಗಿ ತೋರಿಸಿರುವುದು ಇಷ್ಟವಾಯಿತು ಎಂದರು.

   ವಿ.ಮನೋಹರ್ ಅವರೇ ಸಂಗೀತ ನಿರ್ದೇಶನ  ಮಾಡಿದ್ದಾರೆ. ಅಲ್ಲದೆ  ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ  ಹಾಡಿದರೆ,  ರಾಜಕೀಯ ವಿಡಂಬನೆಯ ಹಾಡಿಗೆ ಉಪೇಂದ್ರ ದನಿಯಾಗಿದ್ದಾರೆ. ಚಿತ್ರದ ಉಳಿದ ತಾರಾಬಳಗದಲ್ಲಿ  ಸಾಧುಕೋಕಿಲ, ನವೀನ್ ಡಿ ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಅಲ್ಲದೆ ಹಿರಿಯ ಕಲಾವಿದರಾದ ಎಂ.ಎನ್, ಲಕ್ಷ್ಮಿದೇವಮ್ಮ, ಅಶೋಕ್ ಹಾಗೂ ತ್ರಿವೇಣಿ  ನಟಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,