ಚಿತ್ರರಂಗಕ್ಕೆ ಸುದೀಪ್ ಸಂಬಂಧಿ
ಚಂದನವನಕ್ಕೆ ಸುದೀಪ್ ಕುಟುಂಬದಿಂದ ಮತ್ತೋಂದು ಹೊಸ ಪ್ರತಿಭೆ ಸೇರ್ಪಡೆಯಾಗಿದೆ. ಅಕ್ಕನ ಮಗ ಸಂಚಿತ್‌ಸಂಜೀವ್ ‘ಜಿಮ್ಮಿ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಪಂಚತಾರ ಹೋಟೆಲ್‌ದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಕಿಚ್ಚ ಜ್ಯೂನಿಯರ್ ಎಂದೇ ಪರಿಚಯಿಸಿಕೊಂಡಿರುವ ಯುವನಟನನ್ನು ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್ ವೇದಿಕೆಗೆ ಕರೆತರುವ ಮೂಲಕ ಅಧಿಕೃತವಾಗಿ ಸಿನಿಮಾರಂಗಕ್ಕೆ ಬರಮಾಡಿಕೊಳ್ಳಲಾಯಿತು.
ಇನ್ನು ಸಂಚಿತ್‌ಸಂಜೀವ್ ಅವರು ಮೊದಲ ಪ್ರಯತ್ನದಲ್ಲೇ ನಿರ್ದೇಶನ ಅಲ್ಲದೆ ನಟನೆಯ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ವಿಶೇಷ. ಇವರನ್ನು ನಂಬಿಕೊಂಡು ಲಹರಿವೇಲು, ಕೆ.ಪಿ.ಶ್ರೀಕಾಂತ್ ಹಾಗೂ ಪ್ರಿಯಾಸುದೀಪ್ ಬಂಡವಾಳ ಹೂಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದೇನೆ. ಜಿಮ್ಮಿ ಯಾರಿಗೂ ಕಮ್ಮಿ ಇರಲ್ಲ ಎಂದು ವಿವರಣೆ ನೀಡಿದರು.
ಎಸ್ ಗ್ರೂಪ್‌ಗೆ ಸಂಚಿತ್ ಬಂದಿರುವುದು ಸ್ವಾಗತ. ಎಸ್ ಎಂದರೆ ಶಿವರಾಜ್‌ಕುಮಾರ್, ಸುದೀಪ್. ಯಶಸ್ಸು ಯಾವಾಗಲೂ ನಿನ್ನದಾಗಲಿ. ಮುಂದೆ ದೊಡ್ಡ ತಂತ್ರಜ್ಘನಾಗಿ ಬೆಳೆಯಿರಿ ಅಂತ ಶುಭ ಹಾರೈಸಿದರು. ಪ್ರಥಮ ಪ್ರಯತ್ನದಲ್ಲಿಯೇ ನಾಯಕ, ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿದ್ದಿಯ. ಟೀಸರ್ ವೈಬ್ರೇಷನ್ ಆಗಿದೆ. ಕೆಲಸ ಮಾಡಿಕೊಂಡು ಇನ್ನು ಸೆನ್ಸೇಷನ್ ಸೃಷ್ಟಿ ಮಾಡಬೇಕು. ಆಗ ಖಂಡಿತ ಗೆಲುವು ನಿನ್ನದಾಗುತ್ತೆ ಎಂಬುದು ರವಿಚಂದ್ರನ್ ಆಶಯ ನುಡಿ.
ಮೈಕ್ ತೆಗೆದುಕೊಂಡ ಸುದೀಪ್ ನನ್ನ ಚಿತ್ರಗಳು ಬಿಡುಗಡೆಯಾಗುವ ಶುಕ್ರವಾರದಂದು ನೀನು ಬರಬೇಡ. ಇನ್ನುಳಿದಂತೆ ಯಾವಾಗ ಬೇಕಾದರೂ ಬಾ. ಅಡ್ಡಿ ಇಲ್ಲ. ಮೀಡಿಯಾದೊಂದಿಗೆ ಬೆರೆಯುವುದನ್ನು ಕಲಿತುಕೋ. ಇಂದಿನ ಯುವನಟರ ಜೊತೆ ಆಲೋಚನೆಗಳನ್ನು ಹಂಚಿಕೋ. ಒಳ್ಳೆಯ ಸ್ನೇಹ ಸಂಬಂಧ ರೂಢಿಸಿಕೊಳ್ಳುವ ಮೂಲಕ ದೊಡ್ಡ ಕಲಾವಿದನಾಗಿ ಎತ್ತರಕ್ಕೆ ಹೋಗು. ಆದರೆ ಎಂದಿಗೂ ಕೂಡ ನಿನ್ನನ್ನು ಪರಿಚಯಿಸಿದ ರವಿಚಂದ್ರನ್, ಶಿವಣ್ಣ ಅವರನ್ನು ಮರೆಯಬೇಡ ಎಂದು ಅಳಿಯನಿಗೆ ಕಿವಿಮಾತು ಹೇಳಿದರು. ವಾಸುಕಿ ವೈಭವ್ ಸಂಗೀತದಲ್ಲಿ ಸುದೀಪ್ ಪುತ್ರಿ ಸಾನ್ವಿಸುದೀಪ್ ಹಾಡಿಗೆ ಧ್ವನಿಯಾಗುವುದರ ಮೂಲಕ ಗಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸುದೀಪ್ ಪೋಷಕರು, ಅಕ್ಕ, ನಿರ್ದೇಶಕರಾದ ಆರ್.ಚಂದ್ರು, ನಿರ್ಮಾಪಕ ಮುನಿರತ್ನನಾಯ್ಡು, ಸಂಗೀತ ಸಂಯೋಜಕ ಗುರುಕಿರಣ್, ಕಾರ್ತಿಕ್‌ಗೌಡ, ಅನೂಪ್‌ಭಂಡಾರಿ ಮುಂತಾದ ಗಣ್ಯರ ಉಪಸ್ಥಿತಿ ಇತ್ತು.