ವಜ್ರಮುನಿ ಡೈಲಾಗ್ ಚಿತ್ರದ ಶೀರ್ಷಿಕೆ
ಗತಕಾಲದ ಖ್ಯಾತ ಖಳನಟ ವಜ್ರಮುನಿ ಹಲವು ಚಿತ್ರಗಳಲ್ಲಿ ‘ಯಲಾ ಕುನ್ನಿ’ ಎಂಬ ಡೈಲಾಗ್ ಬಳಸುತ್ತಿದ್ದು, ಹೆಚ್ಚು ಪ್ರಸಿದ್ದಿಯಾಗಿತ್ತು. ಈಗ ಇದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಮೇರಾ ನಾಮ್ ವಜ್ರಮುನಿ ಎಂಬ ಅಡಿಬರಹವಿದೆ. ಮುಹೂರ್ತ ಸಮಾರಂಭವು ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ವಜ್ರಮುನಿ ಕುಟುಂಬದ ಸದಸ್ಯರು ಆಗಮಿಸಿ ತಂಡಕ್ಕೆ ಶುಭಕೋರಿದ್ದು ವಿಶೇಷವೆನಿಸಿತ್ತು. ಲಕ್ಷೀವಜ್ರಮುನಿ ಪ್ರಥಮ ದೃಶ್ಯಕ್ಕೆ ಕ್ಯಾಮಾರಾ ಚಾಲನೆ ಮಾಡಿದರೆ, ಹಿರಿಯ ಪುತ್ರ ವಿಶ್ವನಾಥ್ ಕ್ಲಾಪ್ ಮಾಡಿದರು. ‘ಸಡಗರ’ ನಿರ್ಮಾಣ ಮಾಡಿರುವ ಮಹೇಶ್ಗೌಡ್ರು ಬಂಡವಾಳ ಹೂಡುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿದ ನಾಯಕ ಕೋಮಲ್ಕುಮಾರ್, ಮೊದಲಬಾರಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕರೇ ಕಥೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮುಕ್ಕಾಲು ಭಾಗ ೧೯೮೧ರ ಕಾಲಘಟ್ಟದಲ್ಲಿ ನಡೆಯುತ್ತದೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಅಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಲಾಗುವುದು. ವಿಶೇಷ ಸೆಟ್ ಹಾಕಲಾಗುತ್ತಿದ್ದು, ಮಾಧ್ಯಮದ ಸಹಕಾರಬೇಕೆಂದು ಕೋರಿದರು. ಪ್ರದೀಪ್ ಆಕ್ಷನ್ ಕಟ್ ಹೇಳುತ್ತಿರುವುದು ಹೊಸ ಅನುಭವ.
ನವ ಪ್ರತಿಭೆ ನಿಸರ್ಗ ನಾಯಕಿ. ಉಳಿದಂತೆ ಯತಿರಾಜ್ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್, ಜಯಸಿಂಹಮುಸುರಿ, ಅರವಿಂದರಾವ್, ಮಂಜುಪಾವಗಡ, ರಾಜುತಾಳಿಕೋಟೆ, ಶಿವರಾಜ್, ಬಿರಾದಾರ್, ವೆಂಕಟೇಶ್ಪ್ರಸಾದ್, ಉಮೇಶ್ಸಕ್ಕರೆನಾಡು, ಅನಿಲ್ಯಾದವ್ ಮತ್ತು ವಜ್ರಮುನಿ ಮೊಮ್ಮಗ ಆಕರ್ಷ್ ಬಣ್ಣ ಹಚ್ಚುತ್ತಿದ್ದಾನೆ. ಸಂಗೀತ ಧರ್ಮವಿಶ್, ಛಾಯಾಗ್ರಹಣ ಉದಯ್ಲೀಲಾ, ದೀಪು.ಎಸ್.ಕುಮಾರ್ ಸಂಕಲನ, ವಿನೋಧ್ ಸಾಹಸ ಚಿತ್ರಕ್ಕಿದೆ.