ದರ್ಬಾರ್ದಲ್ಲಿ ಹಳ್ಳಿ ರಾಜಕೀಯ
ಹಿರಿಯ ಸಾಹಿತಿ, ಸಂಗೀತ ಸಂಯೋಜಕ ಮತ್ತು ನಟ ವಿ.ಮನೋಹರ್ ದೀರ್ಘ ಕಾಲದ ಗ್ಯಾಪ್ ನಂತರ ‘ದರ್ಬಾರ್’ ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತೀಶ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರು, ಸುಮಾರು ೨೩ ವರ್ಷಗಳ ನಂತರ ನಿರ್ದೇಶನ ಮಾಡಿದ್ದೇನೆ. ಅದಕ್ಕೆ ನಿರ್ಮಾಪಕರೇ ಕಾರಣರಾಗಿರುತ್ತಾರೆ. ಇಂದ್ರಧುನುಷ್ ಮಾಡಿದ ಮೇಲೆ ಏನೇನೋ ಆಯಿತು. ನಂತರ ಧಾರವಾಹಿ, ಸಂಗೀತದ ಮೇಲೆ ಬ್ಯುಸಿ ಆದೆ. ಸಿನಿಮಾರಂಗಕ್ಕೆ ಬರುವ ಮುನ್ನ ಕೆಲ ಪತ್ರಿಕೆಗಳಿಗೆ ಕಾರ್ಟೂನ್ ಬರೆದುಕೊಡುತ್ತಿದ್ದೆ. ಆಗಿಂದಲೇ ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ.
. ‘ದಿಲ್ದಾರ್’ ಸಮಯದಲ್ಲಿ ಸತೀಶ್ ಸ್ನೇಹಿತರಾದರು. ಮೊನ್ನೆ ಸಿಕ್ಕಾಗ ಇವತ್ತಿನ ರಾಜಕೀಯದ ವಿಷಯಕ್ಕೆ ಸಂಬಂದಿಸಿದಂತೆ ವ್ಯಂಗ್ಯವಾಗಿ ಸೆಬ್ಜೆಕ್ಟ್ ಮಾಡಿಕೊಂಡಿದ್ದೇನೆ. ನೀವೇ ಮಾಡಿಕೊಡಬೇಕೆಂದು ಕೇಳಿಕೊಂಡರು. ಅದರಂತೆ ಇಲ್ಲಿಯವರೆಗೂ ಬಂದಿದೆ ಎಂದರು.
ಹಳ್ಳಿಯೊಂದರಲ್ಲಿ ನಡೆಯುವ ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ ಮುಖಂಡರು ನಡೆಸುವ ಲಾಭಿ. ಇದನ್ನೆಲ್ಲ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜಾಹ್ವವಿ ನಾಯಕಿ. ಉಳಿದಂತೆ ಎಂ.ಎನ್.ಲಕ್ಷೀದೇವಿ, ಸಾಧುಕೋಕಿಲ, ಅಶೋಕ್, ನವೀನ್.ಡಿ.ಪಡೀಲ್, ಹುಲಿಕಾರ್ತಿಕ್ ಮುಂತಾದವರು ಅಭಿನಯಿಸಿದ್ದಾರೆ. ಟೈಟಲ್‌ಸಾಂಗ್‌ಗೆ ಚಂದನ್‌ಶೆಟ್ಟಿ ಹಾಗೂ ರಾಜಕೀಯ ವಿಡಂಬನೆ ಗೀತೆಗೆ ಉಪೇಂದ್ರ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಸಾಮ್ರಾಟ್.ಎಸ್, ಸಾಹಸ ಮಾಸ್‌ಮಾದ-ವಿನೋಧ್ ಅವರದಾಗಿದೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಏಪ್ರಿಲ್‌ದಲ್ಲಿ ತೆರೆಕಾಣುವ ಸಾಧ್ಯತೆ ಇದೆ.