ಚಿತ್ರರಂಗದಲ್ಲಿ ಅನಂತನಾಗ್ಗೆ ಐದು ದಶಕದ ಸಂಭ್ರಮ
ತಮ್ಮದೆ ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಹಿರಿಯ ನಟ ಅನಂತನಾಗ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ‘ಸುವರ್ಣ ಅನಂತ ಸಂಭ್ರಮ’ ಕಾರ್ಯಕ್ರಮ ಆಯೋಜಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಮೇಶ್‌ಅರವಿಂದ್, ಅನಂತನಾಗ್ ಜತೆ ಸಂವಾದ ನಡೆಸಿದರು.
ಸತತ ಐವತ್ತು ವರ್ಷದ ಪಯಣವನ್ನು ಮೆಲುಕು ಹಾಕಿದ ಅವರು ಬಾಲ್ಯದ ದಿನಗಳು, ಆಧ್ಯಾತ್ಮಿಕ ವಾತಾವರಣ, ಸಂಗೀತ, ತಬಲಾ ಕಲಿತಿದ್ದು, ನಂತರ ಮುಂಬೈಗೆ ಹೋಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾ ಮಧ್ಯೆ ರಂಗಭೂಮಿ ಹೋಗಿ ಪಾತ್ರಗಳನ್ನು ಮಾಡಿದ್ದು ಖುಷಿ ತಂದುಕೊಟ್ಟಿತ್ತು. ಭಗವಂತನ ಶಕ್ತಿ ಇಲ್ಲದೆ ಏನಾದರೂ ಸಾಧನೆ ಮಾಡಲು ಸಾಧ್ಯವಿಲ್ಲ. ತೆರೆ ಮೇಲೆ ಚೆನ್ನಾಗಿ ಅಭಿನಯಿಸಿದ್ದೇನೆ ಅದರ ಹಿಂದೆ ಅನೇಕರ ಶ್ರಮವಿರುತ್ತದೆ. ಕಥೆ ಬರೆದವರು, ನಿರ್ದೇಶಕರು, ಕ್ಯಾಮಾರ ಹೀಗೆ ಇದೆಲ್ಲದರ ಜತೆಗೆ ದೇವರ ಅನುಗ್ರಹ ಇರಬೇಕಾಗುತ್ತದೆ.
ರಾಘವೇಂದ್ರ ಚಿತ್ರವಾಣಿ ಸಂಸ್ಥಾಪಕ ಡಿ.ವಿ.ಸುದೀಂದ್ರ ಅವರೊಂದಿಗೆ ಉತ್ತಮ ಒಡನಾಟವಿತ್ತು. ‘ಗಣೇಶನ ಮದುವೆ’ ಚಿತ್ರ ನಿರ್ಮಾಣ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ವೆಂಕಟೇಶ್, ವಾಸು ಮತ್ತು ಸುನಿಲ್ ಅವರುಗಳಿಗೆ ಕೃತಜ್ಘತೆ ಸಲ್ಲಿಸಬೇಕು. ೯೦ರ ದಶಕದಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿ ಮಂತ್ರಿಯೂ ಆದೆ. ಅದು ಸರಿಹೋಗುವುದಿಲ್ಲವೆಂದು ಮರಳಿ ಬಣ್ಣದ ಲೋಕಕ್ಕೆ ಬಂದೆ. ಸರಿಯಾದ ತರಭೇತಿ ಇರದ ಕಾರಣ ಗಾಯನ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹಾಡುವ ಸಾಹಸಕ್ಕೆ ಹೋಗಲಿಲ್ಲ. ಹಾಗೆ ನೋಡಿದರೆ ಎಲ್ಲರಲ್ಲೂ ಒಬ್ಬ ಗಾಯಕ, ನಟ, ಕಲಾವಿದ ಇರುತ್ತಾನೆ. ಈ ರಂಗದಲ್ಲಿ ನನಗೆ ಆಗದ ಜನರು ಯಾರು ಇಲ್ಲ. ಪತಿಗೆ ಸಿಟ್ಟು ಇರುವುದರ ಬಗ್ಗೆ ಗಾಯಿತ್ರಿ ಘಟನೆ ಹೇಳಿ ಸಭಿಕರನ್ನು ನಗೆಗಡಲಿಗೆ ಕರೆದುಕೊಂಡು ಹೋದರು.