ಭಾವಪೂರ್ಣ ಟ್ರೇಲರ್ ಲೋಕಾರ್ಪಣೆ
ರಾಷ್ಟ್ರ ಪ್ರಶಸ್ತಿ ವಿಜೇತ ಚೇತನ್‌ಮುಂಡಾಡಿ ಈಗ ಕಮರ್ಷಿಯಲ್ ಚಿತ್ರವನ್ನು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಅದಕ್ಕೆ ‘ಭಾವಪೂರ್ಣ’ ವೆಂದು ಹೆಸರನ್ನು ಇಡಲಾಗಿದೆ. ‘ಬೆಸವ ತುರ್ತು ಸ್ವಲ್ಪ ಹಚ್ಚೇ ಇದೆ’ ಅಂತ ಅಡಿಬರಹದಲ್ಲಿ ಹೇಳಲಾಗಿ, ಜನನ ಮತ್ತು ಮರಣ ದಿನಾಂಕವನ್ನು ಪೋಸ್ಟರ್‌ದಲ್ಲಿ ತೋರಿಸಲಾಗಿದೆ. ಪ್ರಶಾಂತ್ ಆಂಜನಪ್ಪ ನಿರ್ಮಾಪಕರಾಗಿ ಹೊಸ ಅನುಭವ. ೯೦ರ ಕಾಲಘಟ್ಟದಲ್ಲಿ ನಡೆಯುವ ಇದರ ಕಥೆಯಲ್ಲಿ ಭಾವನೆಗಳೇ ಪಾತ್ರಗಳಾಗಿರುತ್ತವೆ. ಪುಟ್ಟ ಗ್ರಾಮವೊಂದರ ೫೦ ವರ್ಷದ ವ್ಯಕ್ತಿಯು ತನ್ನಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಪಡುವ ಪರಿಪಾಟಲುಗಳೇ ಮುಖ್ಯ ಕಥಾಹಂದರವಾಗದೆ. ೧೪೦ಕ್ಕೂ ಹೆಚ್ಚು ಚಿತ್ರಗಳಲಿ ಅಭಿನಯಿಸಿರುವ ರಮೇಶ್‌ಪಂಡಿತ್ ಮೊದಲಬಾರಿ ನಾಯಕನಾಗಿ ಅಭಿನಯಿಸಿದ್ದಾರೆ. ಮಂಜುನಾಥ್‌ಹೆಗಡೆ ಮತ್ತೋಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೊನ್ನೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ತಾರಗಣದಲ್ಲಿ ಶೈಲಶ್ರೀ, ಮಂಗಳಾ. ನಾಗೇಂದ್ರಷಾ, ಅಥರ್ವಪ್ರಕಾಶ್, ಸುಜಯ್‌ಶಾಸ್ತ್ರೀ, ಎಂ.ಕೆ.ಮಠ, ವಿನ್ಯಾ, ಉಗ್ರಂಮಂಜು, ಜೆಜೆ ಮುಂತಾದವರ ನಟನೆ ಇದೆ. ಸಂಗೀತ ಸಂಯೋಜಿಸುತ್ತಿರುವ ವಿ.ಮನೋಹರ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ಪ್ರಸನ್ನಗುರಲಕೆರೆ, ಸಂಕಲನ ಕೀರ್ತಿರಾಜ್, ಸಂಭಾಷಣೆ ಸುಂದರ್‌ವೀಣಾ, ನೃತ್ಯ ಭಜರಂಗಿಮೋಹನ್ ಅವರದಾಗಿದೆ. ಸೌತಡ್ಕ, ಸಾಗರ, ಜೋಗ, ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆದಿದೆ.