ಲಂಕೇಶ್ ಮೊಮ್ಮಗನ ಚಿತ್ರಕ್ಕೆ ಮುಹೂರ್ತ
ಲಂಕೇಶ್ ಪುತ್ರ ಇಂದ್ರಜಿತ್‌ಲಂಕೇಶ್ ನಟ, ನಿರ್ದೇಶಕನಾಗಿ ಹೆಸರು ಮಾಡಿದವರು. ಈಗ ಇವರ ಹಿರಿಯ ಮಗ ಸಮರ್ಜಿತ್‌ಲಂಕೇಶ್ ನಾಯಕನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆ ನಡೆದ ಮುಹೂರ್ತ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದರು. ಲಾಫಿಂಗ್ ಬುದ್ದ ಫಿಲಂಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ನಂತರ ಮಾತನಾಡಿದ ಇಂದ್ರಜಿತ್‌ಲಂಕೇಶ್ ಇದೊಂದು ನೈಜ ಘಟನೆಯಿಂದ ಪ್ರೇರಣೆ ಪಡೆದುಕೊಂಡು ಕಥೆಯನ್ನು ಸಿದ್ದಪಡಿಸಲಾಗಿದೆ. ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಬಯಸುವ ಇಂದಿನ ಜನರೇಶನ್ ಯುವಕರ ಮನಸ್ಥಿತಿ ಮತ್ತು ಪ್ರಸಕ್ತ ಯುವಕರಿಗೆ ಪ್ರೇರಣೆಯಾಗುವಂತ ಏಳೆ ಹೊಂದಿದೆ. ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಹುದು. ೨೦೦೫ರಲ್ಲಿ ದೀಪಿಕಾಪಡುಕೋಣೆ ಅವರನ್ನು ಪರಿಚಯಿಸಲಾಗಿತ್ತು. ‘ಪುಟ್ಟಗೌರಿ ಮದುವೆ’ ಖ್ಯಾತಿಯ ಸಾನ್ಯಅಯ್ಯರ್ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಸೋದರಿ ಗೌರಿಲಂಕೇಶ್ ಮೇಲಿನ ಪ್ರೀತಿಯಿಂದ ಸಿನಿಮಾಕ್ಕೆ ‘ಗೌರಿ’ ಹೆಸರನ್ನು ಇಡಲಾಗಿದೆ ಎಂದರು.
ಹಲವು ವರ್ಷಗಳಿಂದ ನಟನೆ, ಸಿನಿಮಾಕ್ಕೆ ಬೇಕಾದ ತರಭೇತಿ ಮಾಡಿಕೊಳ್ಳುತ್ತಿದ್ದೇನೆ. ‘ರಂಗಶಂಕರ’ ‘ನ್ಯೂಯಾರ್ಕ್ ಫಿಲಂ ಅಕಾಡೆಮಿ’ಯಲ್ಲಿ ಅಭಿನಯಕ್ಕೆ ಬೇಕಾದ ಟ್ರೇನಿಂಗ್ ಮುಗಿಸಿದ್ದೇನೆ. ಅಲ್ಲದೆ ‘ಗರಡಿ’ ‘ಕರಟಕಧಮನಕ’ ಚಿತ್ರಗಳಲ್ಲಿ ಯೋಗರಾಜಭಟ್ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ಕಲಿತುಕೊಂಡು, ಅಭಿನಯಕ್ಕೆ ಕಾಲಿಡುತ್ತಿದ್ದೇನೆ. ನಿಮ್ಮಗಳ ಸಹಕಾರಬೇಕೆಂದು ಸಮರ್ಜಿತ್‌ಲಂಕೇಶ್ ಕೋರಿಕೊಂಡರು.
ಸಂಗೀತ ಜೆಸ್ಸಿಗಿಫ್ಟ್-ಚಂದನ್‌ಶೆಟ್ಟಿ, ಕೆ.ಎಂ.ಪ್ರಕಾಶ್ ಸಂಕಲನ, ಎ.ಜೆ.ಶೆಟ್ಟಿ ಛಾಯಾಗ್ರಹಣ ಬಿ.ಎ.ಮಧು ಸಂಭಾಷಣೆ-ರಾಜಶೇಖರ್.ಕೆ.ಎಲ್, ಸಾಹಿತ್ಯ ಕೆ.ಕಲ್ಯಾಣ್-ಡಾ.ನಾಗೇಂದ್ರಪ್ರಸಾದ್-ಕವಿರಾಜ್ ಅವರದಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿ, ಮಾರ್ಚ್ ವೇಳೆಗೆ ತೆರೆಗೆ ತರಲು ತಂಡವು ಯೋಜನೆ ಹಾಕಿಕೊಂಡಿದೆ.