Kousalya Supraja Rama.News

Friday, July 14, 2023

232

ಅಸಾಮಾನ್ಯ ಕಥೆ ಕೌಸಲ್ಯಾ ಸುಪ್ರಜಾ ರಾಮ

       ಎಲ್ಲರ ಮನೆಯ ಕಥೆ ಅಂತ ಹೇಳಿಕೊಂಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೇಲರ್‌ನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶಶಾಂಕ್ ನಿರ್ದೇಶನ ಮಾಡುವ ಜತೆಗೆ ಶಶಾಂಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದು, ನಟ ಬಿ.ಸಿ.ಪಾಟೀಲ್ ಒಡೆತನದ ಕೌರವ ಪ್ರೊಡಕ್ಷನ್ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಡಾರ್ಲಿಂಗ್ ಕೃಷ್ಣ ನಾಯಕ. ಬೃಂದಾಆಚಾರ್ಯ ನಾಯಕಿ. ಮೊನ್ನೆ ಅನಾವರಣಗೊಂಡ ತುಣುಕುಗಳಲ್ಲಿ ಕೊನೆಯಲ್ಲಿ ಮಿಲನಾನಾಗರಾಜು ಎಂಟ್ರಿಕೊಟ್ಟಿದ್ದು ಅವರ ಪಾತ್ರದ ವಿವರವನ್ನು ತಂಡವು ಹೇಳಿಕೊಳ್ಳದೆ ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಿರೆಂದು ಜಾರಿಕೊಂಡಿದೆ.

ಟ್ರೇಲರ್ ನೋಡಿದವರಿಗೆ ಇದು ಪುರುಷ ಪ್ರಧಾನ ಸಮಾಜದ ಅಂಶಗಳು ಇರಲಿದೆ ಎಂದು ಅನಿಸುತ್ತದೆ. ಆದರೆ ಪುರುಷ ಪ್ರಧಾನದ ಸಮಾಜದ ಪ್ರತೀಕದಂತಿರುವ ಕೃಷ್ಣ ಏನಾಗುತ್ತಾರೆ. ಅವರ ಅಹಂ ಸಮಾಜವನ್ನು ಎಷ್ಟು ಆವರಿಸಿಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಹೇಳ ಹೊರಟಿದೆ. ಸಿನಿಮಾವು ನೋಡಿದವರ ಬದುಕಿಗೆ ಕನೆಕ್ಟ್ ಆಗುತ್ತದೆ. ಹಾಗೆಯೇ ನಮ್ಮ ಬದುಕಿನಲ್ಲಿ ಇಂತಹ ಘಟನೆ ನಡೆದಿದೆ. ನಾನು ಈ ರೀತಿ ಆಲೋಚನೆ ಮಾಡಿದ್ದೆ ಎಂದು ಅಂದು ಕೊಳ್ಳಬಹುದು. ಅಪ್ಪ ಮಗನ ಸುತ್ತ ಸಾಗಲಿದೆಯಾದರೂ ಎಲ್ಲರ ಪಾತ್ರಗಳಿಗೆ ಮಹತ್ವವಿರುತ್ತದೆ. ತಾರಾಗಣದಲ್ಲಿ ರಂಗಾಯಣರಘು, ಸುಧಾಬೆಳವಾಡಿ, ನಾಗಭೂಷಣ್ ಮುಂತಾದವರು ನಟಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,