ಅಯುಕ್ತ ಹಾಡು ಬಿಡುಗಡೆ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಅಯುಕ್ತ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ರಚನೆ,ಚಿತ್ರಕಥೆ ಮತ್ತು ನಿರ್ದೇಶನ ಮಾಡಿರುವ ಕನಸುರಮೇಶ್ ಹೇಳುವಂತೆ ಈ ಹಿಂದೆ ಸುಮಾರು ೨೫೦ ನಾಟಕಗಳನ್ನು ನಿರ್ದೇಶಿಸಿದ ಅನುಭವವಿದೆ. ಅದರಿಂದಲೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸುಲಭವಾಯಿತು. ಬಾಲಾಜಿ ಕ್ರಿಯೇಶನ್ಸ್ ಅಡಿಯಲ್ಲಿ ವಿಶ್ವಾಸ್.ಆರ್.ಗಂಗಡ್ಕರ್ ಬಂಡವಾಳ ಹೂಡಿದ್ದಾರೆ. ಮಹೇಶ್‌ಆಲದಹಳ್ಳಿ ಮತ್ತು ಗಿರಿರಾಜ್‌ಕಲ್ಲೂರು ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಸಿನಿಮಾದ ಕುರಿತು ಹೇಳುವುದಾದರೆ ಸಂಪಾದನೆಗೋಸ್ಕರ ಪದವಿ ಮಾಡಬೇಡಿ. ಜ್ಘಾನಾರ್ಜನೆಗೋಸ್ಕರ ಡಿಗ್ರಿ ಮಾಡುವುದು ಒಳಿತು. ಪೋಷಕರು ತಮ್ಮ ಧೋರಣೆಯನ್ನು ನೋಡದೆ ಮಕ್ಕಳು ಇಷ್ಟಪಡುವಂತ ಕೆಲಸಕ್ಕೆ ಸ್ವಾತಂತ್ರ ಕೊಡಬೇಕು. ಅದನ್ನು ಅನುಸರಿಸದೆ ಬಲವಂತ ಮಾಡಿದಾಗ, ಮಕ್ಕಳು ಯಾವ ರೀತಿ ದಿಕ್ಕು ತಪ್ಪುತ್ತಾರೆ. ಮೂವರು ಕಾಲೇಜು ವಿದ್ಯಾರ್ಥಿಗಳು ಜೀವನದಲ್ಲಿ ಏನು ಮಾಡಿಕೊಂಡು ಹೋದರೂ, ಅನುಪಯುಕ್ತವಾಗುತ್ತದೆ. ಅದು ಏತಕ್ಕೆ ಆಗುತ್ತದೆ. ಇವರುಗಳು ಯಾವ ತಪ್ಪು ಮಾಡಿದರು? ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಪ್ರೀತಿಯೊಂದಿಗೆ ಹೇಳಲಾಗಿದೆ. ನೂರಾರು ತಿರುವುಗಳು ಇರಲಿದ್ದು, ಹಾಗೆಯೇ ಪೋಷಕ ಪಾತ್ರಗಳು ಒಂದೊಂದು ಕಥೆಯನ್ನು ಹೇಳಿಕೊಂಡು ಹೋಗುತ್ತದೆ. ಮಂಡ್ಯ, ಕಿರುಗಾವಲು. ಮಳವಳ್ಳಿ, ಬೆಳಕವಾಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ನಾಯಕರುಗಳಾಗಿ ಶ್ರೀನಿವಾಸಗೌಡ, ಅದ್ದೂರಿಬಸವ, ಫೈಯು ಸುಫಿಯಾನ್, ನಾಯಕಿಯರುಗಳಾಗಿ ಅಮೃತ, ಸೌಂದರ್ಯಗೌಡ, ಋತ್ವಿಕ ಉಳಿದಂತೆ ಗಣೇಶ್‌ರಾವ್. ಮಿಮಿಕ್ರಿಗೋಪಿ, ಚನ್ನಬಸವ, ಸಿದ್ದನಾಗ, ಚಾಮುಂಡಿನಾಯಕ, ಶಿವಮಾಧು, ನಿಶಿತ್‌ಪೂಜಾರಿ, ಜಾನ್ಸನ್, ರಮೇಶ್, ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ವಿಲಿಯಂದೃತ್, ಛಾಯಾಗ್ರಹಣ ಅರಸಿಕೆರೆ ದೀಪು, ಸಂಕಲನ ನಿಶಿತ್‌ಪೂಜಾರಿ ಅವರದಾಗಿದೆ.