Toby.Film Trailer Launch

Friday, August 04, 2023

258

 

*ಆಗಸ್ಟ್ 25 ರಿಂದ ರಾಜ್ಯಾದ್ಯಂತ ಮಾರಿ ಹಬ್ಬ* ..

 

 *ಟ್ರೇಲರ್ ನಲ್ಲೇ ಮೋಡಿ ಮಾಡಿದ "ಟೋಬಿ"* ..

 

" ಒಂದು ಮೊಟ್ಟೆಯ ಕಥೆ"ಯ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, ಆಭಿನಯದ ಬಹು ನಿರೀಕ್ಷಿತ, ಅಪಾರ ವೆಚ್ಚದ ಅದ್ದೂರಿ ಸಿನಿಮಾ "ಟೋಬಿ".

 

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರ ಮನ ಗೆದ್ದಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ.

 

ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಗೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೆಚ್ಚಿನ ಗೆಳೆಯನಿಗೆ ಹಾಗೂ

ತಂಡಕ್ಕೆ ಶುಭ ಕೋರಿದರು.

 

ನನಗೆ ರಾಜ್ ಬಿ ಶೆಟ್ಟಿ ಹಾಗೂ ತಂಡದವರ ನೋಡಿದರೆ ಖುಷಿಯಾಗುತ್ತದೆ‌‌‌. ಚಿಕ್ಕ ಬಜೆಟ್ ನಲ್ಲಿ "ಒಂದು ಮೊಟ್ಟೆಯ ಕಥೆ" ಮಾಡಿ ಹಿಟ್ ಮಾಡಿ ತೋರಿಸಿದರು. ಆನಂತರ "ಗರುಡ ಗಮನ ವೃಷಭ ವಾಹನ" ಕೂಡ ಸೂಪರ್ ಹಿಟ್ ಆಯಿತು. ಈಗ "ಟೋಬಿ" ಸರದಿ. ಈ ಚಿತ್ರ ಆ ಎರಡೂ ಚಿತ್ರಗಳನ್ನು ಮೀರಿಸುವಷ್ಟು ಯಶಸ್ವಿಯಾಗಲಿದೆ ಎಂದರು ರಕ್ಷಿತ್ ಶೆಟ್ಟಿ.

 

ಈ ಚಿತ್ರದ ಕಥೆ ಟಿ.ಕೆ.ದಯಾನಂದ್ ನನಗೆ ಮೊದಲು ಹೇಳಿದ್ದು. ನಾನು ಆಗ "ಕಾಂತಾರ" ದಲ್ಲಿ ಬ್ಯುಸಿಯಿದೆ.  ಆನಂತರ ರಾಜ್ ಬಿ ಶೆಟ್ಟಿ ಅವರಿಗೆ ಹೇಳಿದರು. "ಟೋಬಿ" ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ.

ಇಂದು ಬಿಡುಗಡೆಯಾಗಿರುವ ಟ್ರೇಲರ್ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರಿಷಬ್ ಶೆಟ್ಟಿ ತಿಳಿಸಿದರು.

 

"ಟೋಬಿ" ನನ್ನೊಬ್ಬನ ಚಿತ್ರವಲ್ಲ. ನನ್ನ ಇಡೀ ತಂಡದ ಚಿತ್ರ. ಇಡೀ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಇಂದು ಹೆಚ್ಚು ಖುಷಿಯಾಗಿರುವುದು ಬೇರೆ ಚಿತ್ರತಂಡದವರು ಬಂದು ನಮ್ಮ‌ ಚಿತ್ರಕ್ಕೆ ಪ್ರಮೋಷನ್ ಮಾಡುತ್ತಿರುವುದು. "ಹಾಸ್ಟೆಲ್ ಹುಡುಗರು"  ತಂಡ ಹಾಗೂ ನಮ್ಮ ಚಿತ್ರ ಬಿಡುಗಡೆಯಾಗಿ ಒಂದೇ ವಾರಕ್ಕೆ ರಕ್ಷಿತ್ ಶೆಟ್ಟಿ ಅವರ "ಸಪ್ತ ಸಾಗರದಾಚೆ ಎಲ್ಲೋ" ಚಿತ್ರ ಬಿಡುಗಡೆಯಾಗುತ್ತಿದೆ. ಇವರಿಬ್ಬರೂ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆ. ಇದು ಮುಂದುವರೆಯಲಿ‌. ನಮ್ಮ ಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ರಾಜ್ ಬಿ ಶೆಟ್ಟಿ.

 

ಚತ್ರದ ಮೂಲ ಕಥೆ ಬಗ್ಗೆ ಕಥೆಗಾರ ಟಿ.ಕೆ ದಯಾನಂದ್ ಸಂಪೂರ್ಣ ವಿವರ ನೀಡಿದರು.

 

ನಿರ್ಮಾಪಕರಾದ ರವಿ ರೈ ಕಳಸ, ಶ್ರೀಕಾಂತ್, ಚಿತ್ರದಲ್ಲಿ ನಟಿಸಿರುವ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ‌ ಮುಂತಾದವರು ಚಿತ್ರದ ಕುರಿತು ಮಾತನಾಡಿದರು..

ಪ್ರಮೋದ್ ಶೆಟ್ಟಿ, "ಚಾರ್ಲಿ" ಖ್ಯಾತಿಯ ಕಿರಣ್ ರಾಜ್ "ಟೋಬಿ" ಗೆ ಶುಭ ಕೋರಿದರು.

"ಹಾಸ್ಟೆಲ್ ಹುಡುಗರು" , "ಟೋಬಿ"ಗಾಗಿ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು.

 

ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯ ಜೊತೆಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಮತ್ತು ಇನ್ನಷ್ಟು ಕಲಾವಿದರ ತಾರಾಬಳಗವಿದ್ದು, ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರ ಹಿನ್ನಲೆ ಸಂಗೀತ, ಮತ್ತು ಪ್ರವೀಣ್ ಶೀಯಾನ್ ಅವರ ಛಾಯಾಗ್ರಹಣ ಟ್ರೈಲರ್‌ಗೆ ಮತ್ತಷ್ಟು ಕೌತುಕತೆಯನ್ನು ನೀಡಿದೆ. 

 

ಚಿತ್ರವನ್ನು ಲೈಟರ್ ಬುದ್ದ ಫಿಲಂಮ್ಸ್, ಆಗಸ್ತ್ಯ ಫಿಲಂಮ್ಸ್, ಕಾಫೀ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಿಸಿದ್ದು ಇದೇ ಆಗಸ್ಟ್ 25 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,