ಪ್ರಸ್ತುತ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಮಾಯೆ ಅಂಡ್ ಕಂಪನಿ
ದೂರದರ್ಶನದಲ್ಲಿ ಯಶಸ್ವಿಯಾಗಿ ನಿವೃತ್ತಿಗೊಂಡಿರುವ ಎಂ.ಎನ್.ರವೀಂದ್ರರಾವ್ ಮಾತೃಶ್ರೀ ವಿಷನ್ ಸಂಸ್ಥೆ ಹುಟ್ಟುಹಾಕಿ ಇದರ ಮೂಲಕ ಪ್ರಥಮ ಪ್ರಯತ್ನ ಎನ್ನುವಂತೆ ‘ಮಾಯೆ ಅಂಡ್ ಕಂಪನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರುಗಳಾಗಿ ಜಿ.ಮೋಹನ್‌ಕುಮಾರ್, ಎಸ್.ನರಸಿಂಹರಾಜು ಕೈ ಜೋಡಿಸಿದ್ದಾರೆ. ಸಂದೀಪ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್‌ಜೋಷಿ, ನಟಿ ಮಾನಸಜೋಷಿ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು.
ಮಾಯೆ ಅನ್ನೋದು ಸೋಷಿಯಲ್ ಮೀಡಿಯಾ. ಅದರ ಸುತ್ತ ಒಂದಷ್ಟು ಪಾತ್ರಗಳು ಸುತ್ತುತ್ತ ಹೋಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅಪರಾಧಗಳ ಬಗ್ಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ. ಇವತ್ತಿನ ದಿನಗಳಲ್ಲಿ ವಾಟ್ಸಾಪ್, ಫೇಸ್‌ಬುಕ್‌ನಿಂದ ಏನೇನು ಅಘಡಗಳಾಗುತ್ತವೆ. ಅದರಿಂದ ಹೇಗೆ ಹೊರಬಹುದೆಂದು ತೋರಿಸಲಾಗಿದೆ.
ತಾರಾಗಣದಲ್ಲಿ ಅರ್ಜುನ್‌ಕಿಶೋರ್‌ಚಂದ್ರ, ಯಶಶ್ರೀ, ಅನುಷಾಆನಂದ್, ಯಾಸೀನ್ ಮುಂತಾದವರು ನಟಿಸಿದ್ದಾರೆ. ಡಾ.ಹೆಚ್.ಎಂ.ವೆಂಕಟೇಶಮೂರ್ತಿ ಸಾಹಿತ್ಯಕ್ಕೆ ಇಂಚರಪ್ರವೀಣ್ ಸಂಗೀತ ಸಂಯೋಜಿಸಿದ್ದಾರೆ. ಶಂಕರ್‌ಆರಾಧ್ಯ ಛಾಯಾಗ್ರಹಣ, ಲಿಂಗರಾಜ್ ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವು ಮುಂದಿನ ತಿಂಗಳು ತೆರೆಕಾಣುವ ಸಾಧ್ಯತೆ ಇದೆ.