Kaalapatthar.News

Wednesday, October 11, 2023

215

ಕಾಲಾಪತ್ತರ್ದಲ್ಲಿ ಗೋರುಕನ ಹಾಡು

       ‘ಕೆಂಡಸಂಪಿಗೆ’ ಚಿತ್ರದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ವಿಕ್ಕಿವರುಣ್ ಈಗ ‘ಕಾಲಾಪತ್ಥರ್’ ಸಿನಿಮಾದಲ್ಲಿ ನಟನೆ ಹಾಗೂ ನಿರ್ದೇಶಕನ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಭುವನ್ ಮೂವೀಸ್ ಬ್ಯಾನರಿನಲ್ಲಿ ಸುರೇಶ್ ಮತ್ತು ನಾಗರಾಜು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಮೊನ್ನೆಯಷ್ಟೇ ಅಶ್ವಿನಿಪುನೀತ್‌ರಾಜ್‌ಕುಮಾರ್ ಮತ್ತು ತಾರಾ ಸಿನಿಮಾದ ಮೊದಲ ಗೀತೆ ‘ಗೋರುಕನ ಗಾನ’ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು.

      ಇದರ ಕುರಿತಂತೆ ಮಾತನಾಡಿರುವ ವಿಕ್ಕಿವರುಣ್ ಹಾಡಿಗೆ ಅನೂಪ್‌ಸೀಳನ್ ಸಂಗೀತ, ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯ, ಶಿವಾನಿನವೀನ್ ಈ ಚಿತ್ರದ ಮೂಲಕ ಗಾಯಕಿಯಾಗಿ ಪರಿಚಯಗೊಂಡಿದ್ದಾರೆ. ಇದರಲ್ಲಿ ಮಂಗಳಮುಖಿಯರು ಚಿತ್ರದ ಕಥೆ ಹೇಳುತ್ತಾರೆ. 

ಸಿನಿಮಾ ಸಾಗುವ ಗೀತೆಯಾದ ಕಾರಣ ಲಿರಿಕಲ್ ಸಾಂಗ್ ಮಾತ್ರ ಹೊರಬಿಡಲಾಗಿದೆ ಎಂದರು.

      ಶಿಕ್ಷಕಿಯಾಗಿ ಗಂಗಾ ಹೆಸರಿನಲ್ಲಿ ಧನ್ಯಾರಾಮ್‌ಕುಮಾರ್ ನಾಯಕಿ. ಡಾ.ನಾಗೇಂದ್ರಪ್ರಸಾದ್-ಪ್ರಮೋದ್‌ಮರವಂತೆ ಸಾಹಿತ್ಯದ ಗೀತೆಗಳಿಗೆ ವಿಜಯ್‌ಪ್ರಕಾಶ್, ಸಾಯಿವಿಘ್ನೇಶ್, ಅಭಿಷೇಕ್, ಐಶ್ವರ್ಯ, ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್‌ಬೆಳ್ಳಣ್ಣು ಧ್ವನಿಯಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸತ್ಯಪ್ರಕಾಶ್ ಕಥೆ ಬರೆದಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,