ಮಹಿಳಾಪ್ರಧಾನ ಚಿತ್ರ ಫೀನಿಕ್ಸ್
‘ಹುಚ್ಚ’ ‘ಎಕೆ ೪೭’ ‘ಸಿಂಹದ ಮರಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಓಂ ಪ್ರಕಾಶ್‌ರಾವ್ ಗ್ಯಾಪ್ ನಂತರ ‘ಫೀನಿಕ್ಸ್’ ಸಿನಿಮಾಕ್ಕೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಶ್ರೀ ಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಷಾ ಪ್ರಕಾಶ್ ಹೆಸರಿನಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇದು ನಿರ್ದೇಶಕರ ೪೯ನೇ ಚಿತ್ರವಾಗಿದ್ದು, ಮೊದಲಬಾರಿ ಮಹಿಳಾ ಪ್ರಧಾನ ಕಥಾಹಂದರವನ್ನು ತೆಗೆದುಕೊಂಡಿರುವುದು ವಿಶೇಷ.
ಕಳೆದವಾರ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು.
ಲೇಡೀಸ್ ಓರಿಯೆಂಟೆಡ್ ಸಿನಿಮಾವಾದರೂ ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಸಾಹಸ, ಥ್ರಿಲ್ಲರ್ ಮುಂತಾದ ಎಲ್ಲಾ ಅಂಶಗಳು ಇರುತ್ತದೆ. ಮನೆಗೆಲಸದವಳಾಗಿ ನಿಮಿತಾರತ್ನಾಕರ್, ಬೋಲ್ಡ್ ಹುಡುಗಿ, ನಟಿಯಾಗಿ ಕೃತಿಕಾಲೋಬೋ ಮತ್ತು ತನುಷಾರಜಪುತ್ ನಾಯಕಿಯರು. ಇವರುಗಳಿಗೆ ಜೋಡಿಯಾಗಿ ಜಗದೀಶ್, ಭಾಸ್ಕರ್‌ಶೆಟ್ಟಿ ಹಾಗೂ ಪ್ರತಾಪ್ ನಾಯಕರಾಗಲಿರುವರು. ಖಳನಾಗಿ ಪ್ರದೀಪ್‌ರಾಹುತ್, ಉಳಿದಂತೆ ಕಾಕ್ರೋಚ್‌ಸುಧಿ, ಕಿನ್ನಿವಿನೋದ್, ಸ್ವಸ್ತಿಕ್‌ಶಂಕರ್, ಅನಿಲ್‌ಕುಮಾರ್ ಮುಂತಾದವರು ನಟಿಸಲಿದ್ದರೆ. ಬೆಂಗಳೂರು, ಜರ್ಮನಿ, ಆಸ್ಟ್ರಿಯಾದಲ್ಲಿ ಆಗಸ್ಟ್‌ನಿಂದ ಚಿತ್ರೀಕರಣ ನಡೆಸಲಾಗುವುದೆಂದು ತಂಡವು ಹೇಳಿಕೊಂಡಿದೆ.
ಸಾಧುಕೋಕಿಲ ಸಂಗೀತ, ರವಿಕುಮಾರ್ ಛಾಯಾಗ್ರಹಣ, ರಚನೆ ಸುಬ್ರಹ್ಮಣ್ಯ, ಸಂಕಲನ ಲಕ್ಷ್ಮಣ್‌ರೆಡ್ಡಿ, ವಿಜಯನ್ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಇರಲಿದೆ.