ನೆಲ್ಸನ್ ಆಗಿ ವಿನೋಧ್ಪ್ರಭಾಕರ್
‘ಫೈಟರ್’ ಯಶಸ್ಸಿನ ಗುಂಗಿನಲ್ಲಿರುವ ವಿನೋಧ್ಪ್ರಭಾಕರ್ ಈಗ ‘ನೆಲ್ಸನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ಟೀಸರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಟೈಗರ್ ಹವಾ ಆಗಲೂ ಇತ್ತು. ಈಗಲೂ ಇರುತ್ತೆ. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ಅಪ್ಪ ನಿಮಗೆ ಆರ್ಶಿವಾದ ಮಾಡಿದ್ದಾರೆ. ಎಲ್ಲವೂ ಸೂಪರ್ ಆಗಿದೆ. ಮೇಕಿಂಗ್, ಗೆಟಪ್ ಚೆನ್ನಾಗಿದೆ. ಸೆಬ್ಜೆಕ್ಟ್ ಬೇರೆ ತರಹ ಇದೆ. ನಿಮಗೆಲ್ಲರಿಗೂ ಒಳ್ಳಯದಾಗಲಿ.
ಸಿನಿಮಾವು ಯಶಸ್ಸು ಕಾಣಲೆಂದು ಹೇಳಿದರು.
ಲಾಕ್ಡೌನ್ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಹುಟ್ಟಿಕೊಂಡಿದ್ದು. ಬರೆಯುತ್ತಾ ಬರೆಯುತ್ತಾ ಕಥೆ ಬೆಳೆಯಿತು. ಮಲಯಾಳಂ, ತಮಿಳು ಉದ್ಯಮಕ್ಕೆ ಇದನ್ನು ತೆಗೆದುಕೊಂಡು ಹೋಗಿದ್ದೆ. ಆದರೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು. ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕ ಬಿ.ಎಂ.ಶ್ರೀರಾಮ್ ಸಿಕ್ಕಿದರು. ವಿನೋಧ್ ಅವರ ಡೆಡಿಕೇಶನ್ ನೋಡಿ ಭಯವಾಯಿತು. ೬೦ ರಿಂದ ೯೦ರ ಒಳಗಡೆ ಚಾಮರಾಜನಗರದಲ್ಲಿ ನಡೆಯುವ ಘಟನೆಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಅಲ್ಲಿನ ಕ್ರೈಂ ಮಾಫಿಯಾ ಯಾರ ಕಣ್ಣಿಗೂ ಬಿದ್ದಿಲ್ಲ. ಅದನ್ನು ತೋರಿಸುತ್ತೇನೆಂದು ನಿರ್ದೇಶಕ ಎಂ.ಅರುಣ್ಕುಮಾರ್ ಮಾಹಿತಿ ನೀಡಿದರು.
ಉಪೇಂದ್ರ, ದರ್ಶನ್ ಟೀಸರ್ ನೋಡಿ ಖುಷಿಪಟ್ಟಿದ್ದಾರೆ. ಈ ತರಹದ ಚಿತ್ರ ಮಾಡಲು ಧೈರ್ಯ ಬೇಕು. ನಿರ್ಮಾಪಕರಿಗೆ ನಮ್ಮ ಮೇಲೆ ನಂಬಿಕೆ ಇದೆ. ನಿರ್ದೇಶಕರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಅದ್ಬುತ ಸಂಗೀತ ಸಂಯೋಜಕ. ಇದೆಲ್ಲದರ ಬಗ್ಗೆ ಮುಂದೆ ಮಾತನಾಡುವೆ ಎನ್ನುತ್ತಾರೆ ವಿನೋಧ್ಪ್ರಭಾಕರ್.