Kaiva.Film News

Monday, November 13, 2023

196

ಸತ್ಯ ಘಟನೆಯ ಕೈವ

      ‘ಬೆಲ್ ಬಾಟಂ’ ನಿರ್ದೇಶಕ ಜಯತೀರ್ಥ ಸದ್ದಿಲ್ಲದೆ ‘ಕೈವ’ ಸಿನಿಮಾ ಮುಗಿಸಿದ್ದಾರೆ. ಅವರು ಹೇಳುವಂತೆ ೧೯೮೩ರಲ್ಲಿ ಬೆಂಗಳೂರಿನ ತಿಗಳರ ಪೇಟೆಯಲ್ಲಿ ನಡೆದ ಘಟನೆಯಾಗಿರುತ್ತದೆ. ಎಂಟು ವರ್ಷದ ಹಿಂದೆ ಪೋಸ್ಟ್ ಮಾರ್ಟಂ ರೂಮ್‌ಗೆ ಹೋಗಿದ್ದೆ. ಅಲ್ಲಿನ ಸಿಬ್ಬಂದಿಗಳನ್ನು ಮಾತನಾಡಿಸುವಾಗ, ನಲವತ್ತು ವರ್ಷಗಳ ಹಿಂದೆ ತಿಗಳರಪೇಟೆಯಲ್ಲಿ ನಡೆದ ಘಟನೆಯ ಸಣ್ಣ ಸುಳಿವು ಸಿಕ್ಕಿತು. ಅದರ ಜಾಡು ಹಿಡಿದು ಹೋದಾಗ, ಕರಗದಲ್ಲಿ ಶುರುವಾದ ಪ್ರೀತಿ, ಬಳಿಕ ನಡೆದ ಹತ್ಯೆ ಇದೆಲ್ಲದರ ಮಾಹಿತಿ ದೊರೆಯಿತು. ಅದನ್ನು ಇನ್ನಷ್ಟು ಕೆದಕಿದಾಗ ರೋಚಕತೆ ಸುದ್ದಿಗಳು ತಿಳಿಯುತ್ತಾ ಹೋಯಿತು. ಅದನ್ನೆ ಚಿತ್ರಕಥೆಯಾಗಿ ಮಾರ್ಪಡಿಸಿ, ಸಿನಿಮಾ ಸ್ಪರ್ಶ ನೀಡಲಾಗಿದೆ ಎನ್ನುತ್ತಾರೆ. ಅನುಭವ ಕ್ರಿಯೇಶನ್ಸ್ ಅಡಿಯಲ್ಲಿ ರವೀಂದ್ರಕುಮಾರ್ ಬಂಡವಾಳ ಹೂಡಿದ್ದಾರೆ.

        ಪ್ರಚಾರದ ಮೊದಲ ಹಂತವಾಗಿ ಟೀಸರ್‌ನ್ನು ಅಭಿಷೇಕ್‌ಅಂಬರೀಷ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಕರಗದಲ್ಲಿ ಮೂಡುವ ಪ್ರೇಮ ಕಥೆ, ಅದಕ್ಕೆ ಅಡ್ಡಿ ಮಾಡುವ ದುಷ್ಟರನ್ನು ಆತ ಹೇಗೆ ಸಾಯಿಸುತ್ತಾನೆ ಎಂಬುದನ್ನು ತೋರಿಸಲಾಗಿದೆ. ನಾಯಕನಾಗಿ ಧನ್ವೀರ್, ನಾಯಕಿಯಾಗಿ ಮೇಘಾಶೆಟ್ಟಿ ಮತ್ತೋಂದು ಪ್ರಮುಖ ಪಾತ್ರದಲ್ಲಿ ದಿನಕರ್‌ತೂಗದೀಪ್ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಜೆಕೆ, ರಾಘುಶಿವಮೊಗ್ಗ ಮುಂತಾದವರು ನಟಿಸಿದ್ದಾರೆ. ರಕ್ತ ಸಿಕ್ತವಾದ ಕೈಯಲ್ಲಿ ಆಯುಧ ಹಿಡಿದು ರೋಷಾಗ್ನಿ ಬೀರುವ ಧನ್ವೀರ್ ಪೋಸ್ಟರ್ ಗಮನ ಸೆಳೆದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,