Dheera Samrat.News

Wednesday, January 31, 2024

238

ಧೀರಸಾಮ್ರಾಟ್ಗೆ ಪ್ರಜ್ವಲ್ ದೇವರಾಜ್ ಸಾಥ್

       ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರಸಾಮ್ರಾಟ್’ ಚಿತ್ರಕ್ಕೆ ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ಗುಲ್ಬರ್ಗಾದ ಗುರುಬಂಡಿ ನಿರ್ಮಾಣ ಮಾಡಿರುವುದು ಎರಡನೇ ಅನುಭವ. ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ವೈರಲ್ ಆಗಿ ಸದ್ದು ಮಾಡುತ್ತಿದೆ. ಮೊನ್ನೆ ನಡೆದ ಸಮಾರಂಭದಲ್ಲಿ ಪ್ರಜ್ವಲ್‌ದೇವರಾಜ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ.  ಈ ಸಂದರ್ಭದಲ್ಲಿ ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿಶೆಟ್ಟಿ, ನಾಗೇಂದ್ರಅರಸು, ಯತಿರಾಜ್, ರವೀಂದ್ರನಾಥ್, ಇಂಚರ, ಸಂಕಲ್ಪ್‌ಪಾಟೀಲ್, ಹರೀಶ್‌ಅರಸು, ಸಾಹಸ ಸಂಯೋಜಕ ಕೌರವ ವೆಂಕಟೇಶ್, ಸಂಭಾಷಣೆಕಾರ ಸಾಯಿರಾಮ್ ಉಪಸ್ತಿತರಿದ್ದರು.

       ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ಕುಮಾರ್(ಪಚ್ಚಿ) ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯಲ್ಲಿ, ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ‘ಸಾವಿಗೆ ಸಾವಿಲ್ಲ’ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂದಿಸಿದಂತೆ ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಶೀರ್ಷಿಕೆ ಅಂದರೆ ಏನು? ಯಾತಕ್ಕೆ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ಕ್ಲೈಮಾಕ್ಸ್‌ದಲ್ಲಿ ತಿಳಿಯಲಿದೆ. 

       ತಾರಗಣದಲ್ಲಿ ಶಂಕರಭಟ್,ಶೋಭರಾಜ್, ಬಲರಾಜವಾಡಿ, ರಮೇಶ್‌ಭಟ್, ಮನಮೋಹನ್‌ರೈ, ರವಿರಾಜ್, ಜ್ಯೋತಿಮರೂರು, ಮಂಡ್ಯಚಂದ್ರು, ಗಿರಿಗೌಡ, ಪ್ರೇಮ, ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ರಾಘವ್‌ಸುಭಾಷ್ ಸಂಗೀತ, ವೀರೇಶ್.ಎನ್.ಟಿ.ಎ-ಅರುಣ್‌ಸುರೇಶ್ ಛಾಯಾಗ್ರಹಣ, ಸತೀಶ್‌ಚಂದ್ರಯ್ಯ ಸಂಕಲನ, ಎ.ಆರ್.ಸಾಯಿರಾಮ್,  ಸಾಹಸ ಕೌರವವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಸಿನಿಮಾವು ಫೆಬ್ರವರಿ ೧೬ರಂದು ತೆರೆಗೆ ಬರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,