ಅಪ್ಪನ ಬೆಲೆ ತಿಳಿಯಲು ಚಿತ್ರ ನೋಡಬೇಕು
‘ಅಪ್ಪ ಐ ಲವ್ ಯು’ ಚಿತ್ರದ ಟ್ರೇಲರ್‌ನ್ನು ಅಭಿಷೇಕ್‌ಅಂಬರೀಷ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಅಪ್ಪ ಅಗಲಿದಾಗ ನನಗೆ ಇಪ್ಪತ್ತಾರು ವರ್ಷ. ಅವರು ಎಲ್ಲರನ್ನು ಮಾತಾಡಿಸುವಂತೆ ನನ್ನನ್ನೂ ಬೈದೇ ಮಾತನಾಡಿಸುತ್ತಿದ್ದರು. ಆದರೆ ಅವರ ಪ್ರೀತಿ, ಪಟ್ಟ ಕಷ್ಟಗಳ ಅರಿವಾದಾಗ ಅವರೇ ಜೊತೆಯಲ್ಲಿ ಇರಲಿಲ್ಲ. ಎಲ್ಲರಲ್ಲಿ ನನ್ನದೊಂದು ಮನವಿ. ಅಪ್ಪ ಜೊತೆಗಿರುವಾಗಲೇ ಅವರಿಗೊಂದು ಮೆಚ್ಚುಗೆ ಕೊಡಿ ಎಂದರು.
ಮುಖ್ಯ ಪಾತ್ರದಲ್ಲಿ ನಟಿಸಿರುವ ನೆನಪಿರಲಿ ಪ್ರೇಮ್ ಹೇಳುವಂತೆ ಸಿನಿಮಾರಂಗದಲ್ಲಿ ೨೨ ವರ್ಷ ಪೂರೈಸಲು ಸಾಧ್ಯವಾಗಿದ್ದು ನಮ್ಮ ತಂದೆಯಿಂದ. ಅಂದು ಗಾಂಧಿನಗರದಲ್ಲಿ ಫೋಟೋ ಹಿಡ್ಕೊಂಡು ಹೀರೋ ಆಗಬೇಕೆಂದು ಅಲೆಯುತ್ತಿದ್ದೆ. ಮಗಳು ಹುಟ್ಟಿದ್ದಳು.
. ಅವಳ ಹಾಲಿಗೂ ದುಡ್ಡಿರಲಿಲ್ಲ. ದುಡಿಯೋ ಸ್ಥಿತಿಯಲ್ಲಿ ನಾನಿರಲಿಲ್ಲ. ಕೊನೆಗೆ ವಿಧಿಯಿಲ್ಲದೆ ಮಗಳಿಗಾಗಿ ಏನಾದರೂ ಕೆಲಸಕ್ಕೆ ಸೇರಿಕೊಳ್ಳಲು ಹೊರಟೆ. ಆಗ ಅಪ್ಪ ತಡೆದು ಹೇಳಿದರು. ಹೀಗೆ ದುಡಿಯೋ ಅವಕಾಶ ಬದುಕಲ್ಲಿ ಸಿಗುತ್ತಲೇ ಇರುತ್ತದೆ. ನಾಯಕ ಅಂತ ಅವಕಾಶ ಸಿಗೋದು ಒಮ್ಮೆ ಮಾತ್ರ ಅಂತ. ಕೊನೆಗೂ ಅವರ ಮಾತೇ ನಿಜ ಆಯ್ತು ಅಂತಾರೆ.
ಸಂಸಾರದಲ್ಲಿ ಅಪ್ಪ ಎಷ್ಟು ಮುಖ್ಯ. ತಂದೆಯನ್ನು ಕಡೆಗಣಿಸಿದಾಗ ಅದು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತೆ ಎನ್ನುವುದನ್ನು ನಿರ್ದೇಶಕ ಅಥರ್ವ ಆರ್ಯ ತೋರಿಸಿದ್ದಾರೆ. ಸಂಜಯ್ ನಾಯಕ. ಜೀವಿತಾ ನಾಯಕಿ. ನಟ ತಬಲನಾಣಿ ಸ್ನೇಹಿತರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಿರುವುದು ಹೊಸ ಅನುಭವ.