Mr Natwarlal.News

Sunday, February 11, 2024

97

ಕನ್ನಡದ ಮಿ.ನಟ್ವರ್ಲಾಲ್

      ಅಮಿತಾಬ್‌ಬಚ್ಚನ್ ಅಭಿನಯದಲ್ಲಿ ‘ಮಿ.ನಟ್ವರ್‌ಲಾಲ್’ ಸಿನಿಮಾವೊಂದು ಆ ಕಾಲಕ್ಕೆ ತೆರೆಕಂಡು ಯಶಸ್ವಿಯಾಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಇದೇ ೨೩ರಂದು ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಂಡವು ಮಾಧ್ಯಮದವರನ್ನು ಭೇಟಿ ಮಾಡಿ ಅನುಭವಗಳನ್ನು ಹಂಚಿಕೊಂಡಿತು.

       ನಾಯಕ ಮತ್ತು ನಿರ್ಮಾಪಕ ತನುಷ್  ಮಾತನಾಡಿ ತುಂಬಾ ಹಣ ಸುರಿದು ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಇದನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ಅವರೇನು ಮಾಡುತ್ತಾರೋ ಮಾಡಲಿ. ಒಂದು ಹಂತದಲ್ಲಿ ಬಜೆಟ್ ಜಾಸ್ತಿಯಾಗಿ ನಿರ್ಮಾಣವನ್ನೇ ನಿಲ್ಲಿಸಬೇಕು ಅಂತುಕೊಂಡಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತರು ಬಂದು ಒಬ್ಬೊಬ್ಬರು ೩೦,೪೦ ಲಕ್ಷ ಕೊಟ್ಟರು. 

ಹಾಗಾಗಿ ಮುಗಿಯುವಂತಾಯಿತು. ಇದನ್ನು ನಾನು ಮಾಡಿಲ್ಲ. ಮಾಡಿಸಿದ್ದು ಅಮ್ಮನವರು. ನಾಲ್ಕು ವರ್ಷಗಳ ಹಿಂದೆ ಶುರುವಾಗಿ, ರಾಜಿಯಾಗದೆ ಎಲ್ಲವನ್ನು ಸರಿಯಾಗಿ ಮಾಡಲಾಗಿದೆ. ಆಗ ನನ್ನ ಬಳಿ ಐದು ಸಾವಿರ ಇರಲಿಲ್ಲ. ಕಾರ್ ಇಎಂಐ ಕಟ್ಟಲು ಸಾಧ್ಯವಾಗಲಿಲ್ಲ. ಸ್ನೇಹಿತನೊಬ್ಬ ಒಬ್ಬರ ಬಳಿ ಕರೆದುಕೊಂಡು ಹೋಗಿ ರಾಜಯೋಗ ದೀಕ್ಷೆ ಕೊಡಿಸಿದರು. ಹೋಮ ಮಾಡಿದೆ. ಆ ನಂತರ ಎಲ್ಲವು ಮ್ಯಾಜಿಕ್‌ನಂತೆ ಹಣ ಹರಿದು ಬಂತು. ಅದಕ್ಕೆ ಅಮ್ಮನವರು ಕಾರಣ ಎಂದರು.

      ವಂಚಕನ ಪಾತ್ರದಲ್ಲಿ ನಾಯಕನಾಗಿ ತನುಷ್ ಕಾಣಿಸಿಕೊಂಡಿದ್ದಾರೆ. ಸೋನಲ್‌ಮಾಂತೆರೋ ನಾಯಕಿ. ಉಳಿದಂತೆ ರಾಜೇಶ್‌ನಟರಂಗ, ನಾಗಭೂಷಣ್, ಹರಿಣಿ, ವಿಜಯ್‌ಚೆಂಡೂರ್, ರಘುರಮನಕೊಪ್ಪ, ಕಾಕ್ರೋಚ್‌ಸುಧಿ ಮುಂತಾದವರು ನಟಿಸಿದ್ದಾರೆ. ಧರ್ಮವಿಶ್ ಸಂಗೀತ, ವಿಲಯಂಡೇವಿಡ್ ಛಾಯಾಗ್ರಹಣ ಇರಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,