For Regn.Film News

Sunday, February 11, 2024

52

 ಫಾರ್ ರಿಜಿಸ್ಟ್ರೇಷನ್ದಲ್ಲಿ ಸಂಬಂಧಗಳನ್ನು ಹೇಳಲಿದೆ

        ಇಂಜಿನಿಯರ್, ರಂಗಕರ್ಮಿ ನವೀನ್‌ದ್ವಾರಕನಾಥ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ಅನುಭವದಿಂದ ಈಗ  ‘ಫಾರ್ ರಿಜಿಸ್ಟ್ರೇಷನ್’ (ಈoಡಿ ಖegಟಿ.) ಎನ್ನುವ ಸಿನಿಮಾಕ್ಕೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಸಾಂಸರಿಕ ಕಾಮಿಡಿ ಕಥೆಯಲ್ಲಿ ವಾಹನ ನಮ್ಮದಾಗಬೇಕು ಅಂದರೆ ಅದಕ್ಕೆ ರಿಜಿಸ್ಟ್ರೇಷನ್ ಮಾಡಿಸಬೇಕು. ಹಾಗೆಯೇ ಒಂದು ಸಂಬಂಧ ನಮ್ಮದಾಗಬೇಕು ಅಂದರೆ ಏನು ಮಾಡಬೇಕು ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.

        ಪ್ರಚಾರದ ಕೊನೆ ಹಂತವಾಗಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ದಿಯಾ ಖ್ಯಾತಿಯ ಪೃಥ್ವಿಅಂಬರ್ ನಾಯಕ, ಲವ್‌ಮಾಕ್ಟೇಲ್‌ದಲ್ಲಿ ನಟಿಸಿದ್ದ ಮಿಲನಾನಾಗರಾಜು ನಾಯಕಿ. ತಾರಾಗಣದಲ್ಲಿ ಸುಧಾಬೆಳವಾಡಿ, ಬಾಬುಹಿರಣಯ್ಯ, ರಮೇಶ್‌ಭಟ್, ತಬಲಾನಾಣಿ ಮುಂತಾದವರು ನಟಿಸಿದ್ದಾರೆ. ನಿಶ್ಚಲ್ ಫಿಲಂಸ್ ಬ್ಯಾನರ್‌ದಲ್ಲಿ ನವೀನ್‌ರಾವ್ ನಿರ್ಮಾಣ ಮಾಡಿದ್ದಾರೆ. ಹರೀಶ್ ಸಂಗೀತ, ಮನುಶೆಡ್ಗಾರ್ ಸಂಕಲನವಿದೆ. ಫೆಬ್ರವರಿ ೨೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,