Kaatera.Film Success Meet

Monday, January 01, 2024

148

ನಾನು ಮಾಡುವುದು ಕಮರ್ಷಿಯಲ್ ಚಿತ್ರ ಪ್ರಶಸ್ತಿಗಲ್ಲದರ್ಶನ್

       ಮೊನ್ನೆಯಷ್ಟೇ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ‘ಕಾಟೇರ’ ಚಿತ್ರತಂಡವು ಮಾಧ್ಯಮದವರನ್ನು ಭೇಟಿ ಮಾಡಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರವಾದರು. ಅತಿ ಹೆಚ್ಚು ಉತ್ತರಗಳನ್ನು ನೀಡಿದ್ದು ದರ್ಶನ್. ಅವರ ಮಾತುಗಳಲ್ಲಿ ಹೇಳುವುದಾದರೆ, ಯಾವುದೇ ಸಿನಿಮಾ ಒಪ್ಪಲು ೩ ಪ್ರಮುಖ ಅಂಶಗಳನ್ನು ನೋಡುತ್ತೇನೆ. ಹೆಣ್ಣನ್ನು ತುಚ್ಚವಾಗಿ ನೋಡಬಾರದು. ನಮ್ಮ ನೆಲ, ಕನ್ನಡದ ಬಗ್ಗೆ ಕೇವಲವಾದ ಸಂಭಾಷಣೆ ಇರಬಾರದು. ನಿರ್ಮಾಪಕರಿಗೆ ಲಾಭ ತಂದುಕೊಡಬೇಕು. ಈ ಮೂರನ್ನು ಇಟ್ಟುಕೊಂಡು ಕಾಲ್‌ಶೀಟ್ ಕೊಡುತ್ತೇನೆ.

ಚಿತ್ರದಲ್ಲಿ ‘ಭಕ್ತ ಪ್ರಹ್ಲಾದ’ ಡೈಲಾಗ್ ಹೇಳಿದ್ದೇನೆ. ಹಾಗಂತ ಅಣ್ಣಾವ್ರ ಹೋಲಿಕೆ ಮಾಡುವುದು ಬೇಡ. ಡಾ.ರಾಜ್ ಅವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅಪ್ಪ ನಾನು ಅವರ ಕುಟುಂಬದಿಂದಲೇ ಚಿತ್ರರಂಗಕ್ಕೆ ಬಂದವರು. ಪೂರ್ಣಿಮಾ ಎಂಟರ್‌ಪ್ರೈಸಸ್‌ದಲ್ಲಿ ಲೈಟ್ ಬಾಯ್ ಆಗಿ ೧೭೫ ಬಾಟಕ್ಕೆ ಕೆಲಸ ಮಾಡಿದ್ದೇನೆ. ಅಂದಿನಿಂದಲೂ ದೊಡ್ಮನೆ ಮೇಲೆ ತುಂಬಾ ಗೌರವವಿದೆ. ನನಗೆ ಪ್ರಶಸ್ತಿಗಳು ಮುಖ್ಯವಲ್ಲ. ನಾನು ಮಾಡುವುದು ಕಮರ್ಷಿಯಲ್ ಚಿತ್ರ. ನಿರ್ಮಾಪಕರು ಸೇಫ್ ಆಗಬೇಕು. ವಿತರಕರಿಗೆ ಹಾಕಿದ ಹಣ ವಾಪಸ್ಸು ಬರಬೇಕು. ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬರುವ ನೋಡುಗನಿಗೆ ಖುಷಿಯಾಗಬೇಕು. ಕನ್ನಡದ ಜನ ಚಿತ್ರಕ್ಕೆ ಕೊಡುತ್ತಿರುವ ಪ್ರತಿಕ್ರಿಯೆ ನನ್ನ ಪಾಲಿಗೆ ಆಸ್ಕರ್‌ಗಿಂತಲೂ ದೊಡ್ಡದು ಎನ್ನುತ್ತಾರೆ.

      ನಾನ್ಯಾವತ್ತು ಸಿನಿಮಾಗಳ ಲಾಭ ನಷ್ಟದ ಬಗ್ಗೆ ಚರ್ಚೆ ಮಾಡಿಲ್ಲ. ಅಷ್ಟು ಇಷ್ಟು ಕಲೆಕ್ಷನ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿ ಬಂದಿವೆ. ಇಷ್ಟಾದರೆ ಭಗವಂತ ಕೊಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ಗಳಿಕೆಯಂತು ಚೆನ್ನಾಗಿ ಆಗುತ್ತಿದೆ. ಎಲ್ಲವನ್ನು ಕೊನೆಯಲ್ಲಿ ನೋಡಿ ಲೆಕ್ಕವನ್ನು ಕೊಡುತ್ತೇನೆಂದು ನಿರ್ಮಾಪಕ ರಾಕ್‌ಲೈನ್‌ವೆಂಕಟೇಶ್ ಹೇಳಿದರು.

     ಸಂತೋಷಕೂಟದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಶೃತಿ, ಕುಮಾರ್‌ಗೋವಿಂದು, ನಿರ್ದೇಶಕ ತರುಣ್‌ಸುಧೀರ್, ಸಂಗೀತ ಸಂಯೋಜಕ ಹರಿಕೃಷ್ಣ, ಸಂಭಾಷಣೆಗಾರ ಮಾಸ್ತಿ, ಅವಿನಾಶ್ ಮುಂತಾದವರು ಹಾಜರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,