Kaljiga.Film News

Monday, April 15, 2024

39

ಕರಾವಳಿ ಪ್ರತಿಭೆಗಳ ಕಲ್ಜಿಗ

      ಕರಾವಳಿ ಸೀಮೆಯ ಯುವ ಪ್ರತಿಭೆಗಳೇ ಸೇರಿಕೊಂಡು ‘ಕಲ್ಜಿಗ’  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ನಾದಬ್ರಹ್ಮ ಹಂಸಲೇಖಾ ಸಮ್ಮುಖದಲ್ಲಿ ನಾನಾ ಕ್ಷೇತ್ರದ ಗಣ್ಯರು ಟೈಟಲ್ ಹಾಗೂ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು. ಎಸ್.ಕೆ.ಗ್ರೂಪ್ ಮಾರ್ಕೆಟಿಂಗ್ ಸಂಸ್ಥೆ ಮಾಲೀಕ ಶರತ್‌ಕುಮಾರ್.ಎ.ಕೆ ಅವರು ಹಿಮಾನಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.  ಸಾಕಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಸುಮನ್‌ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ.

      ಸಿನಿಮಾದ ಸಾರಾಂಶವನ್ನು ಗೌಪ್ಯವಾಗಿಟ್ಟಿರುವ ತಂಡವು ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥೆ ಎಂಬುದಾಗಿ ಸಣ್ಣದಾದ ಏಳೆಯನ್ನು ಹೊರಬಿಡಲಾಗಿದೆ. ಕೋಸ್ಟಲ್‌ವುಡ್‌ದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ಅರ್ಜುನ್‌ಕಾಪಿಕಾಡ್ ನಾಯಕ. ಕನ್ನಡತಿ ಸುಶ್ಮಿತಭಟ್ ನಾಯಕಿ. ಮಂಗಳೂರು ಕಡೆಯ ಕನ್ನಡ ಭಾಷೆಯನ್ನು ಬಳಸಿಕೊಳ್ಳಲಾಗಿದ್ದು, ಮುಂದೆ ತುಳು ಭಾಷೆಗೆ ಡಬ್ ಮಾಡಲು ಚಿಂತನೆ ನಡೆಸಲಾಗಿದೆ. ಛಾಯಾಗ್ರಹಣ ಸಚಿನ್‌ಶೆಟ್ಟಿ, ಹಿನ್ನಲೆ ಶಬ್ದ ಪ್ರಸಾದ್.ಕೆ.ಶೆಟ್ಟಿ,  ಯಶ್ವಿನ್.ಕೆ.ಶೆಟ್ಟಿಗಾರ್ ಸಂಕಲನವಿದೆ. ಉಡುಪಿ, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸೆಪ್ಟಂಬರ್ ವೇಳೆಗೆ ತೆರೆ ಕಾಣುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,